ಆಫ್ರಿಕಾ: ಅಫ್ರಿಕಾದ ದಕ್ಷಿಣ ಭಾಗದಲ್ಲಿ ತೀವ್ರ ಬರ ಕಾಣಿಸಿಕೊಂಡಿದ್ದು, ತುತ್ತು ಅನ್ನ ಹಾಗೂ ಹನಿ ನೀರಿಗೂ ಹಾಹಾಕಾರ ಬಂದೊದಗಿದೆ.
ಕೋಟ್ಯಾಂತರ ಮಂದಿ ಆಹಾರದ ಕೊರತೆಯಿಂದ ನಲುಗುತ್ತಿದ್ದು, ಆಹಾರಕ್ಕಾಗಿ ದೈತ್ಯ ಆನೆಗಳನ್ನು ಕೊಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಂಬಾಬ್ವೆ, ನಮೀಬಿಯಾ, ಜಾಂಬಿಯಾ, ಅಂಗೋಲಾ ಹಾಗೂ ಮಾಲವಿ ಸೇರಿದಂತೆ ಅನೇಕ ಭಾಗದಲ್ಲಿ ತೀವ್ರ ಬರ ಆವರಿಸಿದೆ.
ತೀವ್ರ ಬರದಿಂದಾಗಿ ಐದು ವರ್ಷದ ಕೆಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತಿದ್ದು, ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಳೆ ಪ್ರತಿಕೂಲ ಪರಿಣಾಮ ಬೀರಿದೆ.
ನೀರಿನ ಕೊರತೆಯಿಂದ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಹಾಗೂ ದೌರ್ಜನ್ಯಗಳಿಗೆ ಕಾರಣವಾಗುತ್ತಿದೆ.
ತೀವ್ರ ಬರ ಆವರಿಸಿರುವ ಹಿನ್ನೆಲೆಯಲ್ಲಿ ಜಾನುವಾರುಗಳು ಕಷ್ಟವನ್ನು ಕೇಳೋರೆ ಇಲ್ಲದಂತಾಗಿದ್ದು, ನದಿಗಳಲ್ಲಿ ತೋಡಿದ ಚಿಲುಮೆಯಲ್ಲಿ ನೀರು ಕುಡಿಯುವ ಪರಿಸ್ಥಿತಿ ಉದ್ಭವವಾಗಿದೆ.
ಜಿಂಬಾಬ್ವೆ ಹಾಗೂ ನಮೀಬಿಯಾದ ಸರ್ಕಾರಗಳು ತಮ್ಮ ದೇಶದ ಹೆಮ್ಮೆಯ ಪ್ರತೀಕವಾಗಿದ್ದ ಆನೆಗಳು ಸೇರಿದಂತೆ ನೂರಾರು ಪ್ರಾಣಿಗಳನ್ನು ಆಹಾರಕ್ಕಾಗಿ ಕೊಂದು ಹಾಕುತ್ತಿವೆ.