Mysore
25
few clouds

Social Media

ಶುಕ್ರವಾರ, 09 ಜನವರಿ 2026
Light
Dark

ನಟ ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣ: ಥಾಣೆಯಲ್ಲಿ ಆರೋಪಿಯ ಬಂಧನ

ಮುಂಬೈ: ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ವಿರುದ್ಧ ಚಾಕು ಇರಿತ ದಾಳಿ ನಡೆಸಿದ ಆರೋಪಿಯನ್ನು ಮುಂಬೈ ಪೊಲೀಸರು ಇಂದು ಥಾಣೆಯಲ್ಲಿ ಬಂಧಿಸಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿ ಎಂದು ಎಎನ್‌ಐ ವರದಿ ನೀಡಿದೆ.

ಮುಂಬೈ ಪೊಲೀಸರು ಇಂದು(ಜನವರಿ.19) ಥಾಣೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಮುಂಬೈ ಪೊಲೀಸ್‌ ಇಲಾಖೆಯ ಡಿಸಿಪಿ ಅವರು, ದಟ್ಟ ಪೊದೆಗಳ ಮಧ್ಯದಲ್ಲಿ ಒಣಹುಲ್ಲಿನ ಅಡಿಯಲ್ಲಿ ನಿದ್ದೆ ಮಾಡುತ್ತಿದ್ದ ಸ್ಥಿತಿಯಲ್ಲಿ ಆರೋಪಿ ಪತ್ತೆಯಾಗಿದ್ದಾನೆ. ಅಲ್ಲದೇ ಆರೋಪಿಯೂ ಈ ಮೊದಲು ಇಲ್ಲಿ ಕೆಲಸ ಮಾಡುತ್ತಿದ್ದ, ಆದ್ದರಿಂದ ಈ ಸ್ಥಳದ ಅರಿವು ಆತನಿಗೆ ಇದು, ತಪ್ಪಿಸಿಕೊಳ್ಳುವ ಜಾಗವನ್ನು ಸಹ ಕಂಡುಕೊಂಡಿದ್ದ ಎಂದು ಹೇಳಿದ್ದಾರೆ.

ಇನ್ನೂ ಆರೋಪಿಯೂ ಮೊದಲು ತನ್ನ ಹೆಸರನ್ನು ಬಿಜೋಯ್‌ ದಾಸ್‌ ಎಂದು ಹೇಳಿಕೊಂಡಿದ್ದು, ನಂತರ ಮೊಹಮ್ಮದ್‌ ಸಜ್ಜಾದ್‌ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಪೊಲೀಸರು ಆತನ ಗುರುತನ್ನು ದೃಢಪಡಿಸುವ ಸಲುವಾಗಿ ಹೆಚ್ಚಿನ ತನಿಖೆಗಾಗಿ ಆತನನ್ನು ಮುಂಬೈಗೆ ಕರೆ ತರಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Tags:
error: Content is protected !!