ದುಬೈ: ಹೈಸ್ಪೀಡ್ ರೇಸಿಂಗ್ ಅಭ್ಯಾಸದ ವೇಳೆ ತಮಿಳು ನಟ ಅಜಿತ್ ಕುಮಾರ್ ಕಾರು ಅಪಘಾತಕ್ಕೀಡಾಗಿದೆ.
ಮುಂಬರುವ 24ಎಚ್ ದುಬೈ 2025ರ ರೇಸಿಂಗ್ ಅಭ್ಯಾಸದ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ನಟ ಅಜಿತ್ ಕುಮಾರ್ ಅವರ ಕಾರು ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಅಜಿತ್ ಅವರು ಕಾರು ನಿಲುಗಡೆಗೆ ಬರುವ ಮೊದಲು ನಿಯಂತ್ರಣ ಕಳೆದುಕೊಂಡ ಕಾರು ಗೋಡೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅವರನ್ನು ರಕ್ಷಿಸಲು ಕೆಲವರು ಧಾವಿಸಿದ್ದಾರೆ. ಬಳಿಕ ನಿಧಾನವಾಗಿ ನಟ ಅಜಿತ್ ಕಾರಿನಿಂದ ಕೆಳಗಿಳಿದು ಬಂದಿದ್ದಾರೆ. ಅದೃಷ್ಟವಶಾತ್ ನಟ ಅಜಿತ್ ಕುಮಾರ್ ಅವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.





