Mysore
19
scattered clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಭಾರತಕ್ಕೆ ಆಗಮಿಸಿದ ಅಬುಧಾಬಿ ಯುವರಾಜ ಅಲ್‌ ನಹ್ಯಾನ್‌

ನವದೆಹಲಿ: ಅಬುಧಾಬಿಯ ಯುವರಾಜ ಶೇಖ್‌ ಖಾಲಿದ್‌ ಬಿನ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ ಅವರು ಪ್ರಧಾನಿ ನರೇಂದ್ರ ಮೋದಿ ಆಹ್ವಾನದ ಮೇರೆಗೆ ಭಾರತಕ್ಕೆ ಆಗಮಿಸಿದ್ದಾರೆ.

ಭಾರತಕ್ಕೆ ಆಗಮಿಸಿದ ಅಲ್‌ ನಹ್ಯಾನ್‌ ಅವರನ್ನು ಸಚಿವ ಪಿಯೂಷ್‌ ಗೋಯಲ್‌ ಅವರು ಔಪಚಾರಿಕವಾಗಿ ಸ್ವಾಗತಿಸಿದ್ದಾರೆ.

ಅಬುಧಾಬಿಯ ಯುವರಾಜರಾದ ನಂತರ ಮೊದಲ ಬಾರಿಗೆ ಅಲ್‌ ನಹ್ಯಾನ್‌ ಅವರು ಭಾರತಕ್ಕೆ ಆಗಮಿಸಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ದ್ವಿಪಕ್ಷೀಯ ಸಹಕಾರದ ವ್ಯಾಪಕ ವಿಷಯಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಹ ಭೇಟಿಯಾಗಲಿದ್ದಾರೆ.

ನಾಳೆ ನಹ್ಯಾನ್‌ ಅವರು ಮುಂಬೈಗೆ ಭೇಟಿ ನೀಡಲಿದ್ದು, ವ್ಯಾಪಾರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಎರಡೂ ದೇಶಗಳ ಉದ್ಯಮಿಗಳು ಈ ಸಮಾವೇಶದಲ್ಲಿ ಭಾಗವಹಿಸುವುದು ಅತ್ಯಂತ ವಿಶೇಷವೆನಿಸಿದೆ.

 

Tags:
error: Content is protected !!