Mysore
25
clear sky

Social Media

ಭಾನುವಾರ, 08 ಫೆಬ್ರವರಿ 2026
Light
Dark

ಕರ್ತವ್ಯದ ವೇಳೆ ಆಕಸ್ಮಿಕ ಗುಂಡು ಹಾರಿ ಓರ್ವ ಯೋಧ ಸಾವು

ಚೈನ್ನೈ: ನೌಕಪಡೆಯ ಕರ್ತವ್ಯ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಬೆಳಗಾವಿ ಮೂಲದ ಓರ್ವ ಯೋಧ ಸಾವಿಗೀಡಾಗಿರುವ ಘಟನೆ ಚೈನ್ನೈನಲ್ಲಿ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಘಟನೆಯಲ್ಲಿ ಮೃತಪಟ್ಟಿರುವ ಯೋಧನನ್ನು ಬೆಳಗಾವಿ ಜಿಲ್ಲೆಯ ಮೂಡಲಗಿಯ ಕಲ್ಲೋಳಿ ಗ್ರಾಮದ ಪ್ರವೀಣ್‌ ಸುಭಾಷ್‌ ಖಾನಗೌಡರ ಎಂದು ಗುರುತಿಸಲಾಗಿದೆ. ಅವರು ಚೈನ್ನೈನ ನೌಕಾಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಪ್ರವೀಣ್‌ ಸುಭಾಷ್‌ ಅವರಿಗೆ ಕರ್ತವ್ಯದ ವೇಳೆ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ಅವರ ತಲೆಗೆ ಹಾರಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತ ಯೋಧ ಸಾಯುವುದಕ್ಕೂ ಒಂದು ಗಂಟೆಯ ಮುನ್ನ ತಾಯಿಯೊಂದಿಗೆ ಫೋನ್‌ ಕರೆಯ ಮೂಲಕ ಮಾತನಾಡಿದ್ದರು. ಇನ್ನು ಈ ಯೋಧ 2020ರ ಫೆಬ್ರವರಿ.12 ರಂದು ನೌಕಾಪಡೆಗೆ ಸೇರಿದ್ದರು. ಆದರೆ ಇಂದು(ಫೆಬ್ರವರಿ.14) ಸಾವನ್ನಪ್ಪಿ ಇಹಲೋಕ ತ್ಯಜಿಸಿದ್ದಾರೆ. ಅವರ ಪಾರ್ಥಿವ ಶರೀರ ಕಲ್ಲೋಳಿಗೆ ತಲುಪಿದ್ದು, ಗ್ರಾಮದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಸಕಲ ಸರ್ಕಾರಿ ಗೌರವಗಳೊಂದಿಗೆ ಪಂಚಾಯಿತಿಯ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

Tags:
error: Content is protected !!