ವಾಷಿಂಗ್ಟನ್ ಡಿಸಿ: ಅಂತರಾಷ್ಟ್ರೀಯ ವ್ಯಾಪರಕ್ಕೆ ಸಂಬಂಧಿಸಿದಂತೆ ಬ್ರಿಕ್ಸ್ ದೇಶಗಳು ಡಾಲರ್ ಮೇಲಿನ ಅವಲಂಬನೆ ಕೈಬಿಟ್ಟು ಹೊಸ ಕರೆನ್ಸಿ ಅಭಿವೃದ್ಧಿ ಪ್ರಯತ್ನಗಳನ್ನು ಕೈಬಿಡದಿದ್ದರೆ ಅವುಗಳಿಗೆ ಶೇ 100ರಷ್ಟು ಸುಂಕವನ್ನು ವಿಧಿಸುವುದಾಗಿ ಅಮೇರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಬ್ರಿಕ್ಸ್ ಗುಂಪಿನಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ದೇಶಗಳು ಇದ್ದವು. ಇದೀಗ ಇರಾನ್, ಸೌದಿ ಅರೇಬಿಯಾ, ಯುಎಇ, ಅರ್ಜೆಂಟೀನಾ, ಈಜಿಪ್ಟ್ ಮತ್ತು ಇಥಿಯೋಪಿಯಾ ದೇಶಗಳು ಸೇರ್ಪಡೆಗೊಂಡಿವೆ.
ಬ್ರಿಕ್ಸ್ ದೇಶಗಳು ಡಾಲರ್‌ನಿಂದ ದೂರ ಹೋಗುವ ಹಾಗಿಲ್ಲ ಎಂದು ಟ್ರಂಪ್ ಭಾನುವಾರ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಆದರೆ ಡಾಲರ್‌ಗೆ ಪರ್ಯಾಯಗಳನ್ನು ಸೃಷ್ಠಿಸುವ ಕುರಿತು ಬ್ರಿಕ್ಸ್ ದೇಶಗಳು ಧ್ವನಿಯೆತ್ತಿವೆ.
ಹೊಸ ಮೀಸಲು ಕರೆನ್ಸಿ ತಯಾರು ಮಾಡಲು ಚೀನಾ ಮತ್ತು ರಷ್ಯಾ ಮುಂಚೂಣಿಯಲ್ಲಿದ್ದಾವೆ. ಕಳೆದ ವರ್ಷ ರಷ್ಯಾದ ಕಝನ್‌ನಲ್ಲಿ ನಡೆದ ಶೃಂಗಸಭೆಗಳಲ್ಲಿ ಬ್ರಿಕ್ಸ್ ಕರೆನ್ಸಿ ಪ್ರಸ್ತಾಪವನ್ನು ಚರ್ಚಿಸಲಾಗಿತ್ತು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಬದಲಿಗೆ ಯಾವುದೇ ಹೊಸ ಕರೆನ್ಸಿಯನ್ನು ಸೃಷ್ಠಿಸಿದರು ಆ ದೇಶಗಳು ಅಮೇರಿಕಾದಿಂದ ಶೇ. 100 ಸುಂಕಕ್ಕೆ ತುತ್ತಾಗಬೇಕಾಗುತ್ತದೆ. ಬ್ರಿಕ್ಸ್ ದೇಶಗಳು ಸೇರಿದಂತೆ ಇನ್ನುಳಿದ ದೇಶಗಳು ಬದಲಿ ಕರೆನ್ಸಿಯನ್ನು ಬೆಂಬಲಿಸುವುದಿಲ್ಲ ಎಂಬ ನಿಲುವು ಸ್ಪಷ್ಟಪಡಿಸಬೇಕಾಗಿದೆ. ಏನಾದರು ಪ್ರಯತ್ನ ಮಾಡಿದರೆ ಅಮೇರಿಕಾದ ಅದ್ಭುತ ಮಾರುಕಟ್ಟೆಯಿಂದ ದೂರ ಸರಿಯಬೇಕಾಗುತ್ತದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಅಕ್ರಮ ವಲಸೆ ಮತ್ತು ಮಾದಕ ದ್ರವ್ಯ ಕಳ್ಳ ಸಾಗಣೆ ಸಮಸ್ಯೆಗಳು ಮೆಕ್ಸಿಕೊ, ಕೆನಡಾ, ಚೀನಾ ದೇಶಗಳಲ್ಲಿ ಹೆಚ್ಚಾಗಿದೆ. ಇದು ಪ್ರಪಂಚಕ್ಕೆ ಮಾರಕ ಇಂತ ದೇಶಗಳಿಂದ ನಮಗೆ ರಫ್ತಾಗುವ ಸರಕುಗಳ ಮೇಲೆ ಸುಂಕ ಹೆಚ್ಚಿಸುವುದಾಗಿ ಹೇಳಿದ್ದಾರೆ.