Mysore
15
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವಕ್ಕೆ ಸಿದ್ದಾಪುರದ ದಂಪತಿ

independeny day delhi

ಬೆಂಗಳೂರು : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉತ್ತರ ಕನ್ನಡ ಜಿಲ್ಲೆಯಾ ಸಿದ್ದಾಪುರ ತಾಲೂಕಿನ ದಂಪತಿಗೆ ಅವಕಾಶ ಸಿಕ್ಕಿದೆ.

ಸಿದ್ದಾಪುರ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನಮನೆ ಸಂಜೀವಿನಿ ಒಕ್ಕೂಟದ ಹಸವಂತೆ ಗ್ರಾಮದ ಪ್ರಗತಿ ಸ್ತ್ರೀ ಶಕ್ತಿ ಸಂಘದ ಸರಸ್ವತಿ ಈಶ್ವರ ನಾಯ್ಕ ದಂಪತಿಗಳು ಆಯ್ಕೆಯಾಗಿದ್ದಾರೆ. ಈ ಸಂಬಂಧ ದಂಪತಿಗೆ ಅಧಿಕಾರಿಗಳು ಆಮಂತ್ರಣ ಪತ್ರಿಕೆಯನ್ನ ನೀಡಿದ್ದಾರೆ.

ಸಂಜೀವಿನಿ ಯೋಜನೆಯಡಿಯಲ್ಲಿ ನಡೆಯುವ ಸರಸ್‌ ಮೇಳಗಳಲ್ಲಿ ಭಾಗವಹಿಸಿದ್ದ ಈ ದಂಪತಿ ತಮ್ಮ ಚಿತ್ತಾರ ಕಲೆಯನ್ನು ಪರಿಚಯ ಮಾಡಿಸಿರುವುದಕ್ಕೆ ಈ ಅವಕಾಶ ದೊರಕಿದೆ ಎಂದು ರಾಷ್ಟ್ರೀಯ ಜೀವನೋಪಾಯ ಇಲಾಖೆಯ ಅಭಿಯಾನ ನಿರ್ದೇಶಕರಾದ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.

ಸರಸ್ವತಿ ಅವರ ಪತಿ ಹಸೆ ಚಿತ್ತಾರ ಕಲಾವಿರ ಈಶ್ವರ ನಾಯ್ಕ ಹಸುವಂತೆ ಅವರಿಗೆ ಪ್ರಸಕ್ತ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿತ್ತು.

ನವದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಸ್ವಸಹಾಯ ಸಂಘದ ಸದಸ್ಯರಾದ ಉತ್ತರ ಕನ್ನಡ ಜಿಲ್ಲೆಯ ಚಿತ್ತಾರ ಕಲೆಯ ಕುಶಲಕರ್ಮಿಗಳನ್ನು ಪ್ರತಿನಿಧಿಸುವ ಸರಸ್ವತಿ ಅವರನ್ನು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀವಿದ್ಯಾ ತಿಳಿಸಿದ್ದಾರೆ.

ಈ ಪ್ರತಿಷ್ಠಿತ ಕಾರ್ಯಕ್ರಮದ ಭಾಗವಾಗಿ, ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡುವ ಅವಕಾಶ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:
error: Content is protected !!