ಇಸ್ಲಾಮಾಬಾದ್: ಪಾಕಿಸ್ತಾನದ 90 ಮಂದಿ ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದು ಬಲೂಚ್ ಲಿಬರೇಶನ್ ಆರ್ಮಿ ಹೇಳಿಕೊಂಡಿದೆ.
ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿ 40ರಲ್ಲಿ ಸೈನಿಕರಿದ್ದ ಬಸ್ಸಿಗೆ ಸ್ಫೋಟಕ ತುಂಬಿದ್ದ ಕಾರು ಡಿಕ್ಕಿ ಹೊಡೆದಿದೆ.
ವಿಶೇಷವೆಂದರೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತದ ಸೈನಿಕರನ್ನು ಉಗ್ರರು ಹೇಗೆ ಗುರಿ ಮಾಡಿ ಕೃತ್ಯ ಎಸಗಿದ್ದರೋ ಅದೇ ರೀತಿಯಾಗಿ ಇಂದು ಪಾಕಿಸ್ತಾನದಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ.
ಬಸ್ಸಿಗೆ ಡಿಕ್ಕಿಯಾದ ಬೆನ್ನಲ್ಲೇ ಕಾರು ತೀವ್ರವಾಗಿ ಸ್ಫೋಟಗೊಂಡಿದೆ. ಸ್ಫೋಟಗೊಳ್ಳುತ್ತಿದ್ದಂತೆ ಛಿದ್ರಗೊಂಡಿರುವ ಬಸ್ಸಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಘಟನೆಯಲ್ಲಿ 90 ಮಂದಿ ಪಾಕ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಬಲೂಚ್ ಲಿಬರೇಶನ್ ಆರ್ಮಿ ಹೇಳಿಕೊಂಡಿದ್ದು, ಇದನ್ನು ಪಾಕ್ ಸೇನೆ ನಿರಾಕರಿಸಿದೆ. ಘಟನೆಯಲ್ಲಿ ಕೇವಲ 12 ಮಂದಿ ಸೈನಿಕರು ಮೃತರಾಗಿದ್ದಾರೆ ಎಂದು ಪಾಕ್ ಸೇನೆ ಹೇಳಿಕೊಂಡಿದೆ.





