Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕೇರಳ ಭೂಕುಸಿತ: ಮೃತರ ಸಂಖ್ಯೆ 282ಕ್ಕೆ ಏರಿಕೆ; ಮೈಸೂರು ಮೂಲದ 9 ಮಂದಿ ನಾಪತ್ತೆ!

ಕೇರಳ: ಕೇರಳದ ವಯನಾಡಿನಲ್ಲಿ ಭಾರೀ ಭೂಕುಸಿತ ದುರಂತದಲ್ಲಿ ಸಿಲುಕಿ ಮೈಸೂರು ಮೂವರು ಸೇರಿದಂತೆ ಮೃತಪಟ್ಟವರ ಸಂಖ್ಯೆ 282ಕ್ಕೆ ಏರಿಕೆಯಾಗಿದೆ.

ನಾಲ್ಕು ಊರುಗಳು ಕ್ರಮೇಣ ಮುಳುಗಡೆಯಾಗಿದ್ದು, ಇದರಲ್ಲಿ 282 ಮಂದಿ ಮೃತರಾಗಿದ್ದು, ಕನಿಷ್ಠ 300 ಮಂದಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇತ್ತ ಕರ್ನಾಟಕ, ಕೇರಳ ರಾಜ್ಯದ ಎನ್‌ಡಿಆರ್‌ಎಫ್‌ ಸೇನೆ ಕಾರ್ಯಪ್ರೌವೃತ್ತರಾಗಿದ್ದು, 82 ನಿರಾಶ್ರಿತ ಕೇಂದ್ರಗಳಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ನಾಪ್ತೆಯಾದ ಮೈಸೂರು ಮೂಲದವರು: ಮೈಸೂರು ಮೂಲದ ಮೂವರು ಶ್ರೀಕಟ್ಟಿ, ಅಚ್ಚು, ಸಾವಿತ್ರಿ ಮೃತಪಟ್ಟಿದ್ದು, ತಿರುಮನಕೂಡಲು ನರಸೀಪುರ ತಾಲೂಕಿನ ನಿವಾಸಿಗಳಾದ ಜಿತು, ದಿವ್ಯ, ರತ್ನ, ಅಶ್ವಿನಿ, ಅಪ್ಪಣ್ಣ, ಶಿವಣ್ಣ, ಗುರುಮಲ್ಲ, ಸಬಿತಾ ಸಾವಿತ್ರಿ 9 ಮಂದಿ ನಾಪತ್ತೆಯಾಗದ್ದಾರೆ.

ಈ ಕುಟುಂಬ 40 ವರ್ಷಗಳ ಹಿಂದೆಯೇ ಕೇರಳದಲ್ಲಿ ವಾಸವಾಗದ್ದರು. ಇನ್ನು ಈ ಮೃತರನ್ನು ಮೊದಲಿಗೆ ಮಂಡ್ಯ ಮೂಲದವರು ಎಂದು ಹೇಳಲಾಗಿತ್ತು. ನಾಪತ್ತೆಯಾಗಿರುವ ಕುಟುಂಬದ ಮಹಿಳೆ ಮಹದೇವಮ್ಮ ಎಂಬುವವರನ್ನು ರಾಜ್ಯದ ನೋಡೆಲ್‌ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಈ ವೇಳೆ ಅವರು ಮೈಸೂರಿಗರು ಎಂಬುದು ತಿಳಿದುಬಂದಿದೆ.

Tags: