Mysore
20
overcast clouds

Social Media

ಬುಧವಾರ, 18 ಡಿಸೆಂಬರ್ 2024
Light
Dark

ಬಾಂದ್ರಾ ರೈಲು ನಿಲ್ದಾಣದಲ್ಲಿ ನೂಕು ನುಗ್ಗಲಿನಿಂದ 9 ಮಂದಿಗೆ ಗಾಯ

ಮುಂಬೈ: ನಗರದ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ರೈಲು ಹತ್ತುವ ವೇಳೆ ಪ್ರಯಾಣಿಕರ ಮಧ್ಯೆ ನೂಕು ನುಗ್ಗಲು ಉಂಟಾಗಿ 9 ಮಂದಿ ಗಾಯಗೊಂಡಿದ್ದಾರೆ.

ಈ ಘಟನೆ ಬೆಳಗ್ಗಿನ ಜಾವ 5.56 ಗಂಟೆಗೆ ಬಾಂದ್ರಾ ಟರ್ಮಿನಸ್‌ ಫ್ಲಾಟ್‌ಫಾರ್ಮ್‌ ನಂ.1 ರಲ್ಲಿ ನಡೆದಿದೆ. ರೈಲು ಸಂಖ್ಯೆ 22921 ಬಾಂದ್ರಾ-ಗೋರಖ್‌ಪುರ ಎಕ್ಸ್‌ಪ್ರೆಸ್‌ ಅನ್ನು ಹತ್ತುವ ವೇಳೆ ವಿಪರೀತ ಜನಸಂಖ್ಯೆಯಿಂದ ಈ ಸನ್ನಿವೇಶ ಉದ್ಭವಿಸಿದೆ ಎಂದು ಬೃಹತ್‌ ಮುಂಬೈ ಮುನ್ಸಿಪಾಲ್‌ ಕಾರ್ಪೋರೇಷನ್‌ ಅಧಿಕಾರಿ ಹೇಳಿದ್ದಾರೆ.

ಈ ಸ್ಥಳದಲ್ಲಿ ಗಾಯಗೊಂಡ 9 ಮಂದಿಯನ್ನು ಭಾಭಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗಾಯಗೊಂಡ ವ್ಯಕ್ತಿಗಳನ್ನು ದಿವ್ಯಾಂಶು ಯೋಗೇಂದ್ರ ಯಾದವ್‌(18), ಶಭೀರ್‌ ಅಬ್ದುಲ್‌ ರೆಹಮಾನ್‌(40), ಪರಮೇಶ್ವರ ಸುಖದರ್‌ ಗುಪ್ತಾ(28), ರವೀಂದ್ರ ಹರಿಹರ ಚುಮಾ(30), ರಾಮಸೇವಕ ರವೀಂದ್ರ ಪ್ರಸಾದ್‌ ಪ್ರಜಾಪತಿ(29), ಸಂಜಯ್‌ ತಿಲಕ್ರಂ ಕಾಂಗೇ(27), ಶರೀಫ್‌ ಶೇಖ್‌(25), ಇಂದ್ರಜಿತ್‌ ಸಹಾನಿ(19), ನೂರ್‌ ಮೊಹಮ್ಮದ್‌ ಶೇಖ್‌(18) ಹಾಗೂ ಮೊಹಮ್ಮದ್‌ ಎಂದು ಗುರುತಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Tags: