Mysore
33
few clouds

Social Media

ಭಾನುವಾರ, 05 ಏಪ್ರಿಲ 2026
Light
Dark

ಡ್ರಗ್ಸ್‌ ಸಮೇತ ಸಿಕ್ಕಿಬಿದ್ದ ನಟಿ ಅಂಜುಕೃಷ್ಣ : 8 ಮಂದಿ ಬಂಧನ

ಚೆನ್ನೈ : ತಮಿಳು ಚಿತ್ರರಂಗದ ಒಬ್ಬ ನಟಿ ಮತ್ತು ಸಹಾಯಕ ನಿರ್ದೇಶಕಿ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಡ್ರಗ್ಸ್ ಸಮೇತ ಪೊಲೀಸರು ಬಂಧಿಸಿದ್ದಾರೆ.

ನಟಿ ಅಂಜು ಕೃಷ್ಣ ಮತ್ತು ಕೆಲವು ತಮಿಳು ಸಿನಿಮಾಗಳಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿರುವ ವಿನ್ಸಿ ನಿವೇತಾ ಅವರುಗಳನ್ನು ತಮಿಳುನಾಡು ಪೊಲೀಸ್ ಇಲಾಖೆಯ ಮಾದಕ ವಸ್ತು ನಿಯಂತ್ರಣ ವಿಭಾಗದ ತಂಡ ಬಂಧಿಸಿದೆ.‌

ಬಂಧಿತರಿಂದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಾನಿ ಚೆಲ್ಲಪ್ಪ ಹೆಸರಿನ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ನಡೆದ ಆಪರೇಷನ್‍ನಲ್ಲಿ ನಟಿ ಸೇರಿದಂತೆ ಇತರರ ಬಂಧನವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಲಸರವಕ್ಕಂ ಎಂಬಲ್ಲಿ 33 ವರ್ಷದ ವಿಘ್ನೆಶ್ವರನ್ ಎಂಬಾತನನ್ನು ಪೊಲೀಸ್ ಬಂಧಿಸಿದ್ದರು. ಆತನ ವಿಚಾರಣೆ ಮಾಡಿದಾಗ ಆತ ವೆಂಕಟೇಶ್ ಹೆಸರಿನ ವ್ಯಕ್ತಿಯಿಂದ ಮಾದಕ ವಸ್ತುಗಳನ್ನು ಖರೀದಿ ಮಾಡಿರುವ ಅಂಶ ತಿಳಿದು ಬಂತು. ಬಳಿಕ ವೆಂಕಟೇಶ್ ಎಂಬಾತನನ್ನು ಪೊಲೀಸರು ಗ್ರಾಹಕನ ರೀತಿ ಸಂಪರ್ಕ ಮಾಡಿ, ಡ್ರಗ್ಸ್ ಮಾರುವಂತೆ ಹೇಳಿ, ನಿಗದಿತ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆ ವ್ಯಕ್ತಿ ಬಂದಾಗ ಆತನನ್ನು ಬಂಧಿಸಿ, ಆತನಿಂದ ಆರು ಗ್ರಾಂ ಮೆಥಾಫೆಟಮೈನ್, ಏಳು ಗ್ರಾಂ ಓಜಿ ಗಾಂಜಾ, ಹದಿನೈದು ಗ್ರಾಂ ಗಾಂಜಾ, ಸ್ಮೊಕಿಂಗ್ ಬಾಂಗ್, ಸ್ಟ್ಯಾಂಪ್ ಮತ್ತು ಒಂಬತ್ತು ಮೊಬೈಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಆತನ ಮಾಹಿತಿಯ ಮೇರೆಗೆ ಪೊಲೀಸರು ಇತರೆ ಕೆಲವರನ್ನು ಬಂಧಿಸಿದ್ದು, ಈ ವೇಳೆ, ನಟಿ ಅಂಜು ಕೃಷ್ಣ ಮತ್ತು ಸಹಾಯಕಿ ನಿರ್ದೇಶಕಿ ವಿನ್ಸಿ ನಿವೇತಾ ಅನ್ನು ಸಹ ಬಂಧಿಸಲಾಗಿದೆ. ಅಂಜು ಕೃಷ್ಣ ತಮಿಳಿನ ವೆಲ್ಲಿಮಲೈ ಮಲಯಾಳಂನ ಆರೊ, ಆಕಾಶಂ ಕದನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

Tags:
error: Content is protected !!