ಹೊಸದಿಲ್ಲಿ: ಸಂವಿಧಾನವನ್ನು ಅಂಗೀಕರಿಸಿ ನವೆಂಬರ್ 26ಕ್ಕೆ 75 ವರ್ಷ ತುಂಬಲಿದೆ. ಇದೇ ದಿನದಂದು 75ನೇ ಸಂಭ್ರಮಾಚರಣೆ ಅಂಗವಾಗಿ ಸಂಸತ್ತಿನ ಜಂಟಿ ಅಧಿವೇಶನ ನಡೆಯಲಿದೆ.
ಈ ಕುರಿತು ಸಂಸತ್ತಿನ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದು, ಸಂಸತ್ತಿನ ಸಂವಿಧಾನ ಸದಸದ ಸಭಾಂಗಣದಲ್ಲಿ ಅಧಿವೇಶನ ನಡೆಯಲಿದೆ. 1949ರ ನವೆಂಬರ್ 26ರಂದು ಅಂದಿನ ಸಂಸತ್ತು ಇದೇ ಸಭಾಂಗಣದಲ್ಲಿ ಸಂವಿಧಾನವನ್ನು ಅಗೀಕರಿಸಿತ್ತು ಎಂದು ಮಾಹಿತಿ ನೀಡಿದ್ದಾರೆ.




