Mysore
15
clear sky

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಕೇರಳದಲ್ಲಿ ಭೂಕುಸಿತ: ಮೃತರ ಸಂಖ್ಯೆ 54ಕ್ಕೆ ಏರಿಕೆ!

ಕೇರಳ (ವಯನಾಡ್‌): ಕೇರಳದ ವಯನಾಡ್‌ ಜಿಲ್ಲೆಯ ಮೆಪ್ಪಾಡಿ, ಚುರ್ಲಮಲಾ ಪ್ರದೇಶಗಳಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಮೃತರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.

ಸೋಮವಾರದಿಂದ ಸುರಿಯುತ್ತಿರುವ ಭಾರೀ ಮಳೆ ತಡರಾತ್ರಿ ಜೋರಾಗಿದ್ದು, ಮಧ್ಯರಾತ್ರಿ 2 ಗಂಟೆಯಿಂದ ಬೆಳಗಿನ ಜಾವ 6 ಗಂಟೆ ವೇಳೆಗೆ ಭಾರೀ ಭೂ ಕುಸಿತ ಉಂಟಾಗಿದೆ.

ಈ ಭೂಕುಸಿತದಲ್ಲಿ ನೂರಾರು ಮನೆಗಳು ಕೊಚ್ಚಿ ಹೋಗಿದ್ದು, ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಚುರ್ಲಮಲಾ ಬಹುತೇಕ ಭೂ ಕುಸಿತಕ್ಕೆ ಸಿಕ್ಕಿದೆ. ಚುರ್ಲಮಲದಿಂದ ಮೆಪ್ಪಾಡಿ ಮಾರ್ಗ ಕಲ್ಪಿಸುವ ರಸ್ತೆ ಭಾಗಶಃ ನಾಶವಾಗಿದೆ.

ಚಾಲಿಯಾರ್‌ ನದಿ ಉಕ್ಕಿ ಅರಿಯುತ್ತಿದ್ದು, ಇದರ ರಭಸಕ್ಕೆ ಇಡೀ ಗ್ರಾಮವೇ ತತ್ತರಿಸಿ ಹೋಗಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ. ಇನ್ನು ಈ ಬಗ್ಗೆ ಕೇಂದ್ರ ಸರ್ಕಾರವೂ ಕೂಡಾ ಚರ್ಚೆ ಮಾಡಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇನ್ನು ಚುರ್ಲಮಲಾ ಭೂಕುಸಿತದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದ್ದು, ಎಲ್ಲರ ರಕ್ಷಣೆ ಮಾಡುವ ಭರವಸೆ ಸಿಎಂ ಪಿಣರಾಯಿ ವಿಜಯನ್‌ ನೀಡಿದ್ದಾರೆ.

Tags:
error: Content is protected !!