15 ಮಂದಿ ಪ್ರವಾಹದಲ್ಲಿ ಸಿಲುಕಿರುವ ಶಂಕೆ
ಪುಣೆ : ಪ್ರವಾಸಿಗರಿಗಾಗಿ ನಿರ್ಮಿಸಲಾಗಿರುವ ಸೇತುವೆಯೊಂದು ಕುಸಿತು ಬಿದ್ದ ಪರಿಣಾಮ ಐದು ಮಂದಿ ಸಾವನ್ನಪ್ಪಿ, ಅನೇಕ ಜನರು ನದಿಗೆ ಬಿದ್ದಿರುವ ಘಟನೆ ಭಾನುವಾರ ನಡೆದಿದೆ.
ಪುಣೆಯ ಕುಂದಮಲ ಪ್ರದೇಶದಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕುಸಿದಿರುವುದು.
ಘಟನೆಯಲ್ಲಿ ಕನಿಷ್ಠ ಐದು ಮಂದಿ ಸಾವನಪ್ಪಿದ್ದು, 10-15 ಮಂದಿ ನದಿ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಣಾ ತಂಡಗಳು ಸ್ಥಳಕ್ಕಾಗಮಿಸಿ ಕಾರ್ಯಚರಣೆ ನಡೆಸುತ್ತಿವೆ. ಜನರನ್ನು ರಕ್ಷಿಸುವುದು ಆರಂಭಿಕೆ ಆದ್ಯತೆಯಾಗಿದೆ ಎಂದು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.
ಸಂತ ತುಕಾರಾಮ ಪವಿತ್ರ ಸ್ಥಳವಾದ ಇಲ್ಲಿಗೆ ಅನೇಕರು ಭೇಟಿ ನೀಡುತ್ತಾರೆ. ವಾರಾಂತ್ಯಗಳಲಂತೂ ಹೆಚ್ಚು ಜನರು ಭೇಟಿ ನೀಡುತ್ತಾರೆ.
ಪುಣೆಯ ಈ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.





