Mysore
27
clear sky

Social Media

ಬುಧವಾರ, 21 ಜನವರಿ 2026
Light
Dark

ಜಮ್ಮು : ಶೇಲ್‌ ದಾಳಿಗೆ ನಾಲ್ವರು ಯೋಧರು ಹುತಾತ್ಮ

ಜಮ್ಮು: ಜಮ್ಮು – ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ನಡೆಸಿದ ಶೇಲ್‌ ದಾಳಿಗೆ 24 ಗಂಟೆಗಳಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಜಮ್ಮುವಿನ ಆರ್.ಎಸ್. ಪುರ ಸೆಕ್ಟರ್‌ನಲ್ಲಿ ಶನಿವಾರ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಬ್ ಇನ್‌ಸ್ಪೆಕ್ಟರ್ ಹುತಾತ್ಮರಾಗಿದ್ದಾರೆ.

ಜೊತೆಗೆ ಇತರ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಹಿಮಾಚಲ ಪ್ರದೇಶ ಮೂಲದ ಜೆಸಿಒ ಸುಬೇದಾರ್ ಮೇಜರ್ ಪವನ್ ಕುಮಾರ್ ಶನಿವಾರ ಮುಂಜಾನೆ ಪೂಂಚ್ ಪ್ರದೇಶದ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಶೆಲ್ ಸಿಡಿದು ಮೃತಪಟ್ಟಿದ್ದಾರೆ.

ಅಂತೆಯೇ ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್‌ಫೆಂಟ್ರಿಯ ರೈಫಲ್‌ಮನ್ ಸುನಿಲ್ ಕುಮಾರ್ (25) ಅವರು ಆರ್.ಎಸ್.ಪುರ ಪ್ರದೇಶದಲ್ಲಿ ನಡೆದ ಗುಂಡಿನದಾಳಿ ಮತ್ತು ಶೆಲ್ಲಿಂಗ್‌ನಲ್ಲಿ ತೀವ್ರವಾಗಿ ಗಾಯಗೊಂಡು ಅಸುನೀಗಿದ್ದಾರೆ.

ಐಎಎಫ್ 36ನೇ ವಿಂಗ್‌ಗೆ ಸೇರಿದ 36 ವರ್ಷದ ವೈದ್ಯಕೀಯ ಸಹಾಯಕ ಸರ್ಜೆಂಟ್ ಸುರೇಂದ್ರ ಕುಮಾರ್ ಮೋಗಾ ಉಧಾಂಪುರದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಮೂಲತಃ ಬೆಂಗಳೂರಿನಲ್ಲಿ ನಿಯೋಜಿಸಲ್ಪಟ್ಟಿದ್ದ ಇವರು, ನಾಲ್ಕು ದಿನಗಳ ಹಿಂದೆ ಉದ್ವಿಗ್ನತೆ ಹಿನ್ನೆಲೆಯಲ್ಲಿ ಉಧಾಂಪುರಕ್ಕೆ ನಿಯೋಜಿತರಾಗಿದ್ದರು. ರಾಜಸ್ಥಾನದ ಮೆಹರ್ದಾಸಿಯಲ್ಲಿರುವ ಮೋಗಾ ಕುಟುಂಬಕ್ಕೆ ಈ ಮಾಹಿತಿಯನ್ನು ರವಾನಿಸಲಾಗಿದೆ. ಅವರಿಗೆ65 ವರ್ಷದ ತಾಯಿ ನಾನು ದೇವಿ, ಪತ್ನಿ ಸೀಮಾ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅವರ ಗೌರವಾರ್ಥ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ಆರ್.ಎಸ್. ಪುರ ಪ್ರದೇಶದಲ್ಲಿ ಪಾಕ್ ನಡೆಸಿದ ತೀವ್ರ ದಾಳಿಯಲ್ಲಿ ಬಿಎಸ್‌ಎಫ್ ಘಟಕದ ಸಬ್ ಇನ್‌ಸ್ಪೆಕ್ಟರ್ ಮೊಹ್ಮದ್ ಇಮ್ತಿಯಾಜ್ ಹುತಾತ್ಮರಾಗಿದ್ದರೆ, ಇತರ ಏಳು ಮಂದಿ ಗಾಯಗೊಂಡಿದ್ದಾರೆ.
ಹುತಾತ್ಮ ಅಧಿಕಾರಿಗೆ ಗೌರವ ಸಲ್ಲಿಸಲು ಭಾನುವಾರ ಜಮ್ಮುವಿನ ಪಲೌರಾದಲ್ಲಿರುವ ಬಿಎಸ್‌ಎಫ್ ಪ್ರಧಾನ ಕಚೇರಿಯಲ್ಲಿ ಪೂರ್ಣ ಗೌರವಗಳೊಂದಿಗೆ ಮಾಲಾರ್ಪಣೆ ಸಮಾರಂಭ ನಡೆಯಿತು.

Tags:
error: Content is protected !!