Mysore
21
clear sky

Social Media

ಸೋಮವಾರ, 02 ಮಾರ್ಚ್ 2026
Light
Dark

ಚೆನ್ನೈ ಏರ್‌ ಶೋ: ಕಾಲ್ತುಳಿತಕ್ಕೆ ನಾಲ್ವರು ಸಾವು, 200ಕ್ಕೂ ಹೆಚ್ಚು ಜನ ಅಸ್ವಸ್ಥ

ಚೆನ್ನೈ: ಇಲ್ಲಿನ ಮರೀನಾ ಬೀಚ್‌ನಲ್ಲಿ ಆಯೋಜಿಸಿದ್ದ ಭಾರತೀಯ ವಾಯುಪಡೆಯ ಏರ್‌ಶೋ ಕಾರ್ಯಕ್ರಮ ವೀಕ್ಷಿಸಲು ಲಕ್ಷಾಂತರ ಜನ ಜಮಾಯಿಸಿದ್ದ ವೇಳೆ ಕಾಲ್ತುಳಿತ ಉಂಟಾಗಿದ್ದು ನಾಲ್ವರು ಸಾವನ್ನಪ್ಪಿದ್ದಾರೆ.

ಇನ್ನು ನಾಲ್ವರ ಸಾವಿಗೆ ಹೀಟ್‌ ಸ್ಟ್ರೋಕ್‌ ಕಾರಣ ಎಂದು ವೈದ್ಯರು ತಿಳಿಸಿದ್ದು, ಘಟನೆಯಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ಅಸ್ವಸ್ಥಗೊಂಡ ಪ್ರೇಕ್ಷಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ 20 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 11 ಗಂಟೆಗೆ ಆರಂಭವಾಗಿದ್ದ ಏರ್‌ ಶೋ ವೀಕ್ಷಿಸಲು ಬರೋಬ್ಬರಿ 5 ಲಕ್ಷ ಜನರು ಜಮಾಯಿಸಿದ್ದರು ಎನ್ನಲಾಗಿದ್ದು, ಬಿಸಿಲ ಝಳಕ್ಕೆ ನಾಲ್ವರು ಅಸುನೀಗಿದ್ದಾರೆ.

Tags:
error: Content is protected !!