Mysore
15
broken clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಭಾರತಕ್ಕೆ ಶೇ.20ರಷ್ಟು ʼಟ್ರಂಪ್‌ ಸುಂಕʼ : ಆ.1ರಿಂದಲೇ ಜಾರಿ

Trump Tariff

ವಾಷಿಂಗ್ಟನ್‌ : ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಈ ಸುಂಕ ಅಗಸ್ಟ್‌ 1ರಿಂದಲೇ ಜಾರಿಯಾಗಲಿದೆ ಎಂದು ಬುಧವಾರ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ರುತ್‌ ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಟ್ರಂಪ್‌, ಭಾರತ ನಮ್ಮ ಸ್ನೇಹಿತನಾಗಿದ್ದರೂ ಅವರೊಂದಿಗೆ ನಾವು ವ್ಯವಹಾರ ಮಾಡಿರುವುದು ಕಡಿಮೆ. ಹೀಗಾಗಿ ಅಮೆರಿಕ ಅವರ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸಿರುವುದಾಗಿ ಹೇಳಿದ್ದಾರೆ.

ಮುಂದುವರೆದು, ಎಲ್ಲಾ ದೇಶಗಳಿಗೆ ಹೋಲಿಸಿದರೆ ಅವರದ್ದು ಅಧಿಕ ಸುಂಕ, ಇಂದು ಆ.1 ರಿಂದ ಜಾರಿಯಾಗುವಂತೆ ಭಾರತಕ್ಕೆ ಶೇ.25 ರಷ್ಟು ಸುಂಕ ವಿಧಿಸಲಾಗಿದೆ ಎಂದಿದ್ದಾರೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಹತ್ಯೆಯನ್ನು ರಷ್ಯಾವು ನಿಲ್ಲಿಸಬೇಕು ಎಂದು ಪ್ರಪಂಚ ಆಗ್ರಹಿಸುತ್ತಿರುವಾಗ ರಷ್ಯಾದಿಂದ ಭಾರತವು ಇಂಧನ ಖರೀದಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲಿ. ಅದಲ್ಲದೇ, ಭಾರತವು ತನ್ನ ಬಹುಪಾಲು ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದ ಖರೀದಿಸಿದ್ದಕ್ಕಾಗಿ ಭಾರತ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Tags:
error: Content is protected !!