ಕೈರೋ: ಅಧಿಕ ತಾಪಮಾನದಿಂದಾಗಿ ಹಜ್ ವಾರ್ಷಿಕ ಯಾತ್ರೆಗೆ ತರಳಿದ್ದ ಸಂದರ್ಭದಲ್ಲಿ ಸುಮಾರು 1300 ಕ್ಕೂ ಅಧಿಕ ಮಂದಿ ಮರಣ ಹೊಂದಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಈ ವರ್ಷ ಅಂದಾಜು 1.8 ಮಿಲಿಯನ್ ಯಾತ್ರಾರ್ಥಿಗಳು ಹಜ್ ಯಾತ್ರೆಗೆ ತೆರಳಿದ್ದರು. ಅದರಲ್ಲಿ ಸುಮಾರು 1.6 ಮಿಲುಯನ್ ನಷ್ಟು ಜನರು ವಿದೇಶಗಳಿಂದ ಬಂದವರೇ ಆಗಿದ್ದಾರೆ. ಇನ್ನು ಈ ಯಾತ್ರೆಯಲ್ಲಿ ಮೃತಪಟ್ಟ ಸಾವಿರ ಮಂದಿಯಲ್ಲಿ ಶೇ. 83ರಷ್ಟು ಜನರು ಈವರೆಗೆ ಯಾವುದೇ ನೋಂದಣಿ ಮಾಡಿಕೊಂಡಿರಲಿಲ್ಲ. ಇವರಿಗೆ ಸೂರು, ಆಹಾರ ಹಾಗೂ ಮೂಲ ಸೌಕರ್ಯ ಸಿಕ್ಕಿರಲಿಲ್ಲ. ಇದರಿಂದ ಅಧಿಕ ತಾಪಮಾನದಿಂದ ಬಳಲಿ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಹೇಳಿದೆ.
ಇನ್ನು 1300 ಮಂದಿ ಮೃತರಲ್ಲಿ 660ಕ್ಕೂ ಹೆಚ್ಚು ಮಂದಿ ಈಜಿಪ್ಟಿನಿಂದ ಬಂದವರೇ ಆಗಿದ್ದಾರೆ ಎಂದು ಸೌದಿ ಅರೇಬಿಯಾ ಹೇಳಿದೆ.