Mysore
18
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಉಜ್ಜಯಿನಿಯ ದೇವಸ್ಥಾನದಲ್ಲಿ ಅಗ್ನಿ ಅವಘಡ

ಮಧ್ಯಪ್ರದೇಶದ ಉಜ್ಜಯಿನಿಯ ದೇವಸ್ಥಾನದಲ್ಲಿ ಇಂದು ( ಮಾರ್ಚ್‌ 25 ) ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಅರ್ಚಕರು ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ. ದೇಶಾದ್ಯಂತ ಸಡಗರ-ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಹೋಳಿ ಹಬ್ಬ ಹಿನ್ನಲೆ ದೇವಾಲಯದ ಗರ್ಭಗುಡಿಯಲ್ಲಿ ಭಸ್ಮ ಆರತಿ ನಡೆಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಐವರು ಅರ್ಚಕರು ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ.

ದೇವಾಲಯ ಗರ್ಭಗುಡಿಯ ವರಾಂಡದಲ್ಲಿ ಭಸ್ಮ ಆರತಿ ಮಹಾಕಾಲ್‌ಗೆ ಗುಲಾಲ್ ಅರ್ಪಿಸುವ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಧೂಳೆಂದಿ ಎಂಬ ಕಾರಣಕ್ಕೆ ಗರ್ಭಗುಡಿಯಲ್ಲಿ ಕವರ್ ಹಾಕಲಾಗಿದ್ದು, ಅರ್ಚಕರು ಸೇರಿದಂತೆ ನೆರೆದಿದ್ದ ಭಕ್ತರಿಗೆ ಬೆಂಕಿ ತಗುಲಿದೆ ಎಂದು ಅರ್ಚಕ ಆಶಿಶ್ ಪೂಜಾರಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಗಾಯಗೊಂಡಿದ್ದವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ದೇವಸ್ಥಾನದ ಪ್ರಧಾನ ಅರ್ಚಕ ಸಂಜಯ್ ಗುರು, ವಿಕಾಸ್ ಪೂಜಾರಿ, ಮನೋಜ್ ಪೂಜಾರಿ, ಅಂಶ್ ಪುರೋಹಿತ್, ಸೇವಕ ಮಹೇಶ್ ಶರ್ಮಾ ಹಾಗೂ ಚಿಂತಾಮನ್ ಗೆಹ್ಲೋಟ್ ಸೇರಿದಂತೆ ಹಲವು ಭಕ್ತರು ಗಾಯಗೊಂಡಿದ್ದಾರೆ.

ವಿಶ್ವವಿಖ್ಯಾತ ಜ್ಯೋತಿರ್ಲಿಂಗದ ಭಸ್ಮತಿ ನೋಡಲು ಸಿಎಂ ಮೋಹನ್ ಯಾದವ್ ಅವರ ಪುತ್ರ ಹಾಗೂ ಪುತ್ರಿ ಕೂಡ ದೇವಾಲಯಕ್ಕೆ ಹೋಗಿದ್ದು ಇಬ್ಬರೂ ಕೂಡ ಸುರಕ್ಷಿತವಾಗಿದ್ದಾರೆ.

ಘಟನೆಯ ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ನೀರಜ್ ಸಿಂಗ್, ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ಮಾಹಿತಿ ಪಡೆದುಕೊಂಡರು. ಜಗದ್ವಿಖ್ಯಾತ ಜ್ಯೋತಿರ್ಲಿಂಗ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸಾವಿರಾರು ಮಂದಿ ಭಕ್ತರು ಸೇರಿದ್ದರು. ಬೆಂಕಿ ಹೊತ್ತಿಕೊಂಡ ನಂತರ ಅಗ್ನಿಶಾಮಕ ಯಂತ್ರಗಳ ಮೂಲಕ ಬೆಂಕಿಯನ್ನು ನಿಯಂತ್ರಿಸಿದರು.

Tags:
error: Content is protected !!