Mysore
22
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಎಸ್ಕಲೇಟರ್​​ನಿಂದ ಜಾರಿ ಬಿದ್ದು 10 ಮಕ್ಕಳಿಗೆ ಗಾಯ

ಹೈದರಾಬಾದ್: ಹೈದರಾಬಾದ್​​ನ ಬಂಜಾರಾ ಹಿಲ್ಸ್​​ನಲ್ಲಿರುವ ಪಿವಿಆರ್ ಸಿನೆಪ್ಲೆಕ್ಸ್​​ಗೆ ಸಿನಿಮಾ ನೋಡಲು ಬಂದಿದ್ದ 10 ಮಕ್ಕಳು ಎಸ್ಕಲೇಟರ್​​ನಿಂದ ಜಾರಿ ಬಿದ್ದು ಗಾಯಗಳಾಗಿವೆ ಎಂದು ತೆಲಂಗಾಣ ಸರ್ಕಾರ ಹೇಳಿದೆ.

1982ರಲ್ಲಿ ತೆರೆಕಂಡ ಗಾಂಧಿ ಸಿನಿಮಾದ ಉಚಿತ ಪ್ರದರ್ಶನವಿದ್ದು, ಅದನ್ನು ನೋಡಲು ಮಕ್ಕಳು ಬಂದಿದ್ದರು. ಗಾಯಗೊಂಡ ಮಕ್ಕಳನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತೆಲಂಗಾಣ ಸರ್ಕಾರವು ದೇಶಭಕ್ತಿ ಮತ್ತು ಸ್ವಾತಂತ್ರ್ಯ ಚಳವಳಿಯ ಬಗ್ಗೆ ತಿಳುವಳಿಕೆಯನ್ನು ಮೂಡಿಸಲು ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಈ ಸಿನಿಮಾ ಪ್ರದರ್ಶನವೂ ಇದೆ. 75 ವರ್ಷಗಳ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸುಮಾರು 22 ಲಕ್ಷ ಮಕ್ಕಳಿಗಾಗಿ 552 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ