Mysore
16
overcast clouds

Social Media

ಗುರುವಾರ, 08 ಜನವರಿ 2026
Light
Dark

ಯುವ ದಸರೆ: ಕನ್ನಡದಲ್ಲೇ ಮಾತನಾಡಿ ಖುಷಿ ಹಂಚಿಕೊಂಡ ಇಳಯರಾಜ

ಮೈಸೂರು: ರಂಗು ರಂಗಿನ ಯುವ ದಸರೆ ಅದ್ದೂರಿಯಾಗಿ ನೆರವೇರುತ್ತಿದೆ. ಐದು ದಿನ ನಡೆಯುವ ಯುವ ದಸರೆಗೆ ಅನೇಕ ಸೆಲೆಬ್ರಿಟಿಗಳು ಬಂದು ಯುವಕರಿಗೆ ರಂಗಿನ ಜೋಸ್‌ ನೀಡುತ್ತಿದ್ದಾರೆ. ಅದೇ ರೀತಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಮತ್ತು ತಂಡ ಅ.10 ರಂದು ಸಂಗೀತ ಸುಧೆ ಹರಿಸಲಿದೆ. ಸದ್ಯ, ಈ ಬಗ್ಗೆ ಇಳಯರಾಜ ಅವರು ಸಂತೋಷ ಹಂಚಿಕೊಂಡಿದ್ದು, ಕನ್ನಡದಲ್ಲೀಯೆ ಮಾತನಾಡಿ ಖುಷಿ ಹೊರಹಾಕಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಸಂದೇಶ ಮೂಲಕ ಮಾತನಾಡಿದ ಅವರು, ಎಲ್ಲರಿಗೂ ನಮಸ್ಕಾರ, ಮೈಸೂರಲ್ಲಿ ದಸರಾ ಕಾರ್ಯಕ್ರಮ ನಡೆಯುತ್ತಿದೆ. ಚಾಮುಂಡಿ ದೇವಿ ಅನುಗ್ರಹದಿಂದ ಕಾರ್ಯಕ್ರಮ ಚೆನ್ನಾಗಿ ನಡೆಯಲಿದೆ ಎಂದು ನಾನು ಭಾವಿಸುತ್ತೇನೆ. ಚಾಮುಂಡಿ ತಾಯಿಯೇ ನನ್ನನ್ನು ಮೈಸೂರಿಗೆ ದಸರಾ ಮಹೋತ್ಸವಕ್ಕೆ ಕರೆಯುತ್ತಿದ್ದಾಳೆ ಎಂದು ನಾನು ಅಂದುಕೊಂಡಿದ್ದೇನೆ. ಅಲ್ಲದೇ ತಾಯಿಯೂ ನನ್ನನ್ನು ಮಾತ್ರವಲ್ಲದೇ ನನ್ನ ತಂಡವನ್ನು ಸಹ ಕರೆಯುತ್ತಿದ್ದಾಳೆ. ಹೀಗಾಗಿ ನಿಮ್ಮನ್ನು ನಾನು ನೋಡಬೇಕು ಎನಿಸುತ್ತಿದೆ. ಆ ಕಾರಣಕ್ಕಾಗಿ ನನ್ನನ್ನು ನೀವು ನೋಡಬೇಕು ಎಂದು ಭಾವಿಸಿದ್ದಾರೆ ನೀವು ಸಹ ಕಾರ್ಯಕ್ರಮಕ್ಕೆ ಬನ್ನಿ ಎಂದು ಕನ್ನಡದಲ್ಲೇ ಮಾತನಾಡಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಯುವ ದಸರಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದು, ಹಲವು ಚಿತ್ರರಂಗದ ಗಣ್ಯರು ಭಾಗವಹಿಸಲು ಮೈಸೂರಿಗೆ ಆಗಮಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಅ.9 ಎ.ಆರ್‌.ರೆಹಮಾನ್‌ ನಂತರ ಅ.10 ರಂದು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಯುವ ದಸರಾ ಸಮಾರಂಭದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ.

 

Tags:
error: Content is protected !!