Mysore
27
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ದಸರಾ ಆನೆಗಳಿಗೆ ತೂಕ ಪರೀಕ್ಷೆ: ಈ ಬಾರಿಯೂ ಅಭಿಮನ್ಯುವೇ ಮೇಲುಗೈ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿಂದು ದಸರಾ ಗಜಪಡೆಗೆ ತೂಕ ಪರೀಕ್ಷೆ ನಡೆಸಲಾಯಿತು.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ಸ್‌ ವ್ಹೇಬ್ರಿಡ್ಜ್‌ನಲ್ಲಿ ನಡೆದ ತೂಕ ಪರೀಕ್ಷೆಯಲ್ಲಿ ಕ್ಯಾಪ್ಟನ್‌ ಅಭಿಮನ್ಯು ಆನೆ 5820 ಕೆಜಿ ತೂಕವಿದ್ದು, ವರಲಕ್ಷ್ಮೀ 3555, ಭೀಮ 5380, ಏಕಲವ್ಯ 5095, ಲಕ್ಷ್ಮಿ 2625, ರೋಹಿತ್‌ 3930, ಗೋಪಿ 5280, ಕಂಜನ್‌ 4725 ಹಾಗೂ ಧನಂಜಯ ಆನೆ 5255 ಕೆಜಿ ತೂಕ ಹೊಂದಿದೆ.

ಇನ್ನು ಎರಡನೇ ತಂಡದಲ್ಲಿ ಮೈಸೂರಿಗೆ ಆಗಮಿಸಿದ ಆನೆಗಳಿಗೂ ಸಹ ತೂಕ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಪ್ರಶಾಂತ ಆನೆ 5240 ಕೆಜಿ ತೂಕವಿದ್ದು, ಹಿರಣ್ಯ ಆನೆ 3160, ಮಹೇಂದ್ರ 5150, ದೊಡ್ಡ ಹರವೆ ಲಕ್ಷ್ಮಿ 3570, ಸುಗ್ರೀವ 5545 ಕೆಜಿ ತೂಕವಿದೆ.

ಒಟ್ಟಾರೆ ಈ ಬಾರಿಯೂ ಕ್ಯಾಪ್ಟನ್‌ ಅಭಿಮನ್ಯು ಆನೆಯೇ ತೂಕದಲ್ಲಿ ಬಲ ಭೀಮನಾಗಿದ್ದು, ವಿಜಯದಶಮಿ ಜಂಬೂಸವಾರಿ ದಿನ ಚಿನ್ನದ ಅಂಬಾರಿ ಹೊತ್ತು ಸಾಗಲು ಸರ್ವ ರೀತಿಯಲ್ಲೂ ಸಜ್ಜಾಗಿದ್ದಾನೆ.

 

Tags: