Mysore
16
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಮೈಸೂರು ಅರಮನೆಯಲ್ಲಿ ಐತಿಹಾಸಿಕ ಜಟ್ಟಿ ಕಾಳಗ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿಯ ಅಂಗವಾಗಿ ಇಂದು ಮೈಸೂರು ಅರಮನೆಯಲ್ಲಿ ಐತಿಹಾಸಿಕ ಜಟ್ಟಿ ಕಾಳಗ ನಡೆಯಿತು.

ಜಟ್ಟಿ ಕಾಳಗ ಅಥವಾ ವಜ್ರಮುಷ್ಠಿ ಕಾಳಗ ದಸರೆಯ ಅತ್ಯಂತ ಭಾಗಗಳಲ್ಲೊಂದು. ಮೈಸೂರಿನ ರಾಜಾಶ್ರಯದಲ್ಲಿ ಬೆಳೆದು ಬಂದಿರುವ ಈ ಕಾಳಗ ವಿಜಯದಶಮಿಯಂದು ಅಂಬಾರಿಯು ಅರಮನೆಯಿಂದ ಹೊರಡುವ ಮುನ್ನ ನಡೆಯುವ ಸಾಂಪ್ರದಾಯಿಕ ಕ್ರೀಡೆ.

ಇತಿಹಾಸದ ಪ್ರಕಾರ ವಜ್ರಮುಷ್ಠಿ ಕಾಳಗ ಮುಗಿದ ನಂತರವಷ್ಟೇ ಅಂಬಾರಿ ಅರಮನೆಯಿಂದ ಹೊರಡುವ ಪ್ರತೀತಿಯಿದೆ.

ಈ ಹಿನ್ನೆಲೆಯಲ್ಲಿಂದು ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಕೃತಕವಾಗಿ ನಿರ್ಮಿಸಿದ ಮಟ್ಟಿ ಅಖಾಡದಲ್ಲಿ ಆನೆ ದಂತದಿಂದ ತಯಾರಿಸಿದ ವಜ್ರನಖ ಎಂಬ ಆಯುಧವನ್ನು ಕೈಗಳಿಗೆ ಧರಿಸಿದ ಜಟ್ಟಿಗಳು ಪರಸ್ಪರ ಕಾದಾಟಕ್ಕಿಳಿದರು.

ಎದುರಾಳಿ ಜಟ್ಟಿಯ ತಲೆಯಿಂದ ರಕ್ತ ಬಂದ ಕೂಡಲೇ ಕಾಳಗ ಕೊನೆಗೊಂಡಿತು. ರಕ್ತ ಬಂದವರು ಸೋತರೆ, ಅದಕ್ಕೆ ಕಾರಣರಾದವರು ಮೇಲುಗೈ ಸಾಧಿಸಿದರು.

ಮೈಸೂರಿನ ಬಲರಾಮ ಜಟ್ಟಿ ಹಾಗೂ ನಾರಾಯಣ ಜಟ್ಟಿ ನಡುವೆ ಜಟ್ಟಿ ಕಾಳಗ ನಡೆದಿದೆ.

ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆದ ಜಟ್ಟಿ ಕಾಳಗವನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಅವರು ವೀಕ್ಷಣೆ ಮಾಡಿದರು.

Tags:
error: Content is protected !!