Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಇಂದು ಅರಮನೆ ವೇದಿಕೆಯಲ್ಲಿ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಅರಮನೆ ವೇದಿಕೆಯಲ್ಲಿ ನಡೆಯುವ ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಹೀಗಿದೆ.

ಸಂಜೆ 4 ಗಂಟೆಯಿಂದ 4.30 ಗಂಟೆಯವರೆಗೆ ಎಂ.ಎನ್ ಗಣೇಶ್ ಮತ್ತು ತಂಡದವರಿಂದ ನಾದಸ್ವರ ನಡೆಯಲಿದ್ದು, ಸಂಜೆ 4.30 ಗಂಟೆಯಿಂದ 5 ಗಂಟೆಯವರೆಗೆ ಶಿವಶರಣ್ಯ ಎಸ್.ಸ್ವಾಮಿ ಮತ್ತು ತಂಡದಿಂದ ತತ್ವಪದ ಗಾಯನ ಏರ್ಪಡಿಸಲಾಗಿದೆ. ಸಂಜೆ 5 ಗಂಟೆಯಿಂದ 5.30 ಗಂಟೆಯವರೆಗೆ ಭಾರತೀಯ ವಿದ್ಯಾಭವನ (ಕಲಾಭಾರತಿ) ರವರಿಂದ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಆಯೋಜಿಸಲಾಗಿದ್ದು, ಸಂಜೆ 5.30 ಗಂಟೆಯಿಂದ 6 ಗಂಟೆಯವರೆಗೆ ಕನ್ನಡ ಕಲಾಲಯ ಟ್ರಸ್ಟ್ ನ ವಿದುಷಿ ಪ್ರಿಯಾಂಕ ಎಲ್ ರವರಿಂದ ನೃತ್ಯರೂಪಕ ನವದುರ್ಗಾವೈಭವ ಕಾರ್ಯಕ್ರಮ ನಡೆಯಲಿದೆ.

ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಪಂಡಿತ್ ನರಸಿಂಹಲು ವಡವಾಟಿ ಮತ್ತು ವಿದ್ವಾನ್ ಕದ್ರಿ ರಮೇಶ್ ನಾಥ್ ಅವರಿಂದ ಕ್ಲಾರಿಯೋನೆಟ್-ಸ್ಯಾಕ್ಸೋಫೋನ್ ಜುಗಲ್ ಬಂದಿ ನಡೆಯಲಿದ್ದು, ರಾತ್ರಿ 7 ಗಂಟೆಯಿಂದ 7.10 ರವರೆಗೆ ಶರಣ್ಯ ನಟರಾಜ್ ಮತ್ತು ತಂಡದವರಿಂದ ಕಥಕ್ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ. ರಾತ್ರಿ 7.10 ಗಂಟೆಯಿಂದ 8.40 ರವರೆಗೆ ಎಚ್ ಜನಾರ್ದನ್ (ಜನ್ನಿ) ಮತ್ತು ತಂಡದವರಿಂದ ಜನಪದ ಸಂಭ್ರಮ ನಡೆಯಲಿದ್ದು, ರಾತ್ರಿ 8.40 ರಿಂದ 10.10 ರವರೆಗೆ ಅಗಮ್ ಬ್ಯಾಂಡ್ – ಹರೀಶ್ ಕೃಷ್ಣನ್ ಅವರಿಂದ ಕರ್ನಾಟಕ ಶಾಸ್ತ್ರೀಯ ವಾದ್ಯವೃಂದ ನಡೆಯಲಿದೆ.

Tags: