ಮೈಸೂರು: ಮೈಸೂರಲ್ಲಿ ದಸರಾ ಸಂಭ್ರಮ ಜೋರಾಗಿದೆ. ಜಗತ್ಪ್ರಸಿದ್ಧ ಮೈಸೂರು ಅರಮನೆಯಲ್ಲಿ ಚಟುವಟಿಕೆಗಳು ಭರದಿಂದ ಸಾಗಿವೆ. ಪ್ರತಿವರ್ಷದಂತೆ ಈ ಬಾರಿಯೂ ಕರಿಕಲ್ಲು ತೊಟ್ಟಿಯಲ್ಲಿ ನಡೆಯುತ್ತಿರುವ ಜಟ್ಟಿ ಕಾಳಗವನ್ನು ಪ್ರಮೋದ ದೇವಿ ಒಡೆಯರ್ ಅವರು ತಮ್ಮ ಮೊಮ್ಮಗ ಆದ್ಯವೀರ್ ಜೊತೆ ವೀಕ್ಷಿಸಿದರು.
ಕಳೆದ ಬಾರಿ ಪ್ರಮೋದ ದೇವಿ ಒಡೆಯರ್ ಅವರು ತಮ್ಮ ಸೊಸೆ ತ್ರಿಷಿಕಾ ಕುಮಾರಿ ಮತ್ತು ಮೊಮ್ಮಗನೊಂದಿಗೆ ಜಟ್ಟಿ ಕಾಳಗ ವೀಕ್ಷಿಸಿದ್ದರು. ಆದರೆ, ಈ ಬಾರಿ ತ್ರಿಷಿಕಾ ಅವರು ಹೆರಿಗೆಗೆ ಹೋಗಿದ್ದಾರೆ. ನಿನ್ನೆ(ಅ.11) ನಗರದ ಖಾಸಗಿ ಆಸ್ಪತ್ರಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.