ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಅಕ್ಟೋಬರ್.15ರವರೆಗೆ ಪ್ಯಾಕೇಜ್ ಟೂರ್ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರವಾಸಿಗರ ಅನುಕೂಲಕ್ಕೆಂದು ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಲು ಈ ವ್ಯವಸ್ಥೆ ಕಲ್ಪಿಸಲಾಗಿದೆ.
ಗಿರಿ ದರ್ಶಿನಿ ಪ್ಯಾಕೇಜ್ ಟೂರ್‌ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನಾಥನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿಬೆಟ್ಟವನ್ನು ವೀಕ್ಷಿಸಬಹುದಾಗಿದೆ.
ಇನ್ನು ಜಲದರ್ಶಿನಿ ಪ್ಯಾಕೇಜ್ ಟೂರ್‌ನಲ್ಲಿ ಗೋಲ್ಡನ್ ಟೆಂಪಲ್, ದುಬಾರೆ, ನಿಸರ್ಗಧಾಮ, ಅಬ್ಬಿ ಜಲಪಾತ, ರಾಜಾಸೀಟ್, ಕೆಆರ್‌ಎಸ್‌ನ್ನು ವೀಕ್ಷಣೆ ಮಾಡಿ ಖುಷಿಪಡಬಹುದಾಗಿದೆ.
ಇನ್ನು ದೇವ ದರ್ಶಿನಿ ಎಂಬ ಪ್ಯಾಕೇಜ್‌ನಲ್ಲಿ ನಂಜನಗೂಡು, ತಲಕಾಡು, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ ಹಾಗೂ ಕೆಆರ್‌ಎಸ್‌ನ್ನು ವೀಕ್ಷಣೆ ಮಾಡಬಹುದಾಗಿದೆ.