ಮೈಸೂರು: ನವರಾತ್ರಿಯ ನಾಲ್ಕನೇ ದಿನವಾದ ಇಂದು ಕೂಷ್ಮಾಂಡ ದೇವಿಯನ್ನು ಆರಾಧನೆ ಮಾಡಲಾಗುತ್ತದೆ.
ಶಾರದೀಯ ನವರಾತ್ರಿಯನ್ನು ಅತ್ಯಂತ ಮಂಗಳಕರ ಹಬ್ಬವೆಂದು ಪರಿಗಣಿಸಲಾಗುತ್ತದೆ. ನವರಾತ್ರಿಯ ನಾಲ್ಕನೇ ದಿನವನ್ನು ದುರ್ಗಾ ದೇವಿಯ ನಾಲ್ಕನೇ ರೂಪವಾದ ಕೂಷ್ಮಾಂಡ ದೇವಿಗೆ ಸಮರ್ಪಿಸಲಾಗಿದೆ.
ಈಕೆಯನ್ನು ದುರ್ಗಾ ದೇವಿಯ ಒಂಭತ್ತು ಅವತಾರಗಳಲ್ಲಿ ಒಬ್ಬಳು ಎಂದು ಹೇಳಲಾಗುತ್ತದೆ. ಶಕ್ತಿ ಮತ್ತು ಸಮತೋಲನಗೊಳಿಸಲು ಪಾರ್ವತಿ ದೇವಿಯು ಈ ರೂಪವನ್ನು ಪಡೆದಳು ಎನ್ನುವ ನಂಬಿಕೆಯಿದೆ.
ತಾಯಿ ಕೂಷ್ಮಾಂಡಳನ್ನು ಪೂಜಿಸುವ ವ್ಯಕ್ತಿ ಸಂತೋಷ, ಸಮೃದ್ಧಿ ಮತ್ತು ಪ್ರಗತಿಯನ್ನು ಪಡೆಯುತ್ತಾನೆ ಎನ್ನುವ ನಂಬಿಕೆಯಿದೆ.