ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯು ಅಂತಿಮವಾಗಿ ಬನ್ನಿಮಂಟಪ ತಲುಪಿತು.
750ಕೆಜಿ ಚಿನ್ನದ ಅಂಬಾರಿ ಹೊತ್ತ ಕ್ಯಾ.ಅಭಿಮನ್ಯು 2 ಗಂಟೆಗಳ ಕಾಲ ರಾಜಬೀದಿಗಳಲ್ಲಿ ಮೆರವಣಿಗೆಯ ಮೂಲಕ 5 ಕಿ.ಮೀ ಸಾಗಿ ಬನ್ನಿಮಂಟಪ ತಲುಪಿದ.
ಇಂದು(ಅ.12) ಶುಭ ಕುಂಭ ಲಗ್ನದ ಸಂಜೆ 4 ರಿಂದ 4.45ರ ಮುಹೂರ್ತದ ಮೂಲಕ ವಿಶ್ವವಿಖ್ಯಾತ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈ ಬಾರಿ ಕ್ಯಾಪ್ಟನ್ ಅಭಿಮನ್ಯು ಆನೆ ಸತತ 5ನೇ ಬಾರಿಗೆ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಮೂರ್ತಿಯನ್ನು 750 ಕೆ.ಜಿ.ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಿದ. ಈ ಅದ್ಭುತ ಕ್ಷಣವನ್ನು ಕೋಟ್ಯಂತರ ಜನರು ಕಣ್ತುಂಬಿಕೊಂಡಿದ್ದಾರೆ.