ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಕರ್ಷಣೆಗಳಲ್ಲಿ ಒಂದಾದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗುರುವಾರ ಸಂಜೆ ಅರಮನೆ ಮುಂಭಾಗದಲ್ಲಿ ಚಾಲನೆ ದೊರೆಯಿತು.
ಝಗಮಗಿಸುವ ವಿದ್ಯುತ್‌ನಿಂದ ಕಂಗೊಳಿಸುತ್ತಿದ್ದ ಅರಮನೆ ಅಂಗಳದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಮೂಲಕ ಮೈಸೂರು ಜನರನ್ನು ರಂಜಿಸುವು ವಿವಿಧ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು.





