Mysore
25
few clouds

Social Media

ಸೋಮವಾರ, 23 ಮಾರ್ಚ್ 2026
Light
Dark

ಮೈಸೂರು ದಸರಾ: ಪಾರಂಪರಿಕ ಜಾವಾ ಮೋಟಾರ್‌ ಬೈಕ್‌ ಸವಾರಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಪಾರಂಪರಿಕ ಜಾವಾ ಮೋಟರ್‌ ಬೈಕ್‌ ಸವಾರಿಗೆ ಇಂದು ಚಾಲನೆ ನೀಡಲಾಯಿತು. ಮೈಸೂರು ನಗರದ ಪುರಭವನ ವೃತ್ತದಿಂದ ಬೈಕ್‌ ಸವಾರರಿಗೆ ಪ್ರಾದೇಶಿಕ ಆಯುಕ್ತ ರಮೇಶ್‌ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತ ರಮೇಶ್‌ ಮಾತನಾಡಿ, ಜನಸಾಮಾನ್ಯರಿಗೆ ನಗರದ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಪಾರಂಪಾರಿಕ ಇಲಾಖೆ ಮತ್ತು ಪುರಾತತ್ವ ಸಂಗ್ರಹಾಲಯ ಇಲಾಖೆ ಜಾವಾ ಬೈಕ್‌ ಜಾಥಾವನ್ನು ಇಂದು ಪರಿಚಯಿಸಿದೆ. ಈ ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ಸವಾರರು ಭಾಗವಹಿಸಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಜಾವಾ ಬೈಕ್‌ ಮೂಲಕ ಸವಾರಿ ಸಾಗಲಿದೆ ಎಂದು ತಿಳಿಸಿದರು.

ಜಾವಾ ಮೋಟಾರ್‌ ಬೈಕ್‌ ಸವಾರಿಯ ಪುರಭವನದಿದ ಹೊರಟು ದೊಡ್ಡ ಗಡಿಯಾರ, ಚಾಮರಾಜ ಒಡೆಯರ್‌ ವೃತ್ತ, ಕೆ.ಆರ್.ಸರ್ಕಲ್‌, ಬನುಮಯ್ಯ ಕಾಲೇಜು, ಕಾಡಾ ಕಚೇರಿ, ಹಾರ್ಡಿಂಜ್‌ ಸರ್ಕಲ್‌, ಎಸ್‌ಐಆರ್‌ಡಿ, ಲಲಿತಮಹಲ್‌ ಟೆರಿಷಿಯನ್‌ ಕಾಲೇಜು, ಪಿ.ಟಿ.ಸರ್ಕಲ್‌, ವಸಂತ ಮಹಲ್‌ ಮತ್ತು ಪುರಾತತ್ವ ಇಲಾಖೆಯನ್ನು ತಲುಪಿತು.

Tags:
error: Content is protected !!