ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಈ ಬಾರಿ ಧನಂಜಯ ಆಯ್ಕೆಯಾಗಿದ್ದಾನೆ.
ಈ ಮೂಲಕ ಅರ್ಜುನನ ಸ್ಥಾನವನ್ನು ಧನಂಜಯ ಆನೆ ತುಂಬಲಿದ್ದಾನೆ.
ಈ ಬಗ್ಗೆ ಇಂದು ಮಾತನಾಡಿದ ಡಿಸಿಎಫ್ ಡಾ.ಪ್ರಭುಗೌಡ ಅವರು, ಜಂಬೂಸವಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೊತ್ತು ಕ್ಯಾಪ್ಟನ್ ಅಭಿಮನ್ಯು ಸಾಗಲಿದ್ದಾನೆ.
ಅಭಿಮನ್ಯುಗೆ ಹಿರಣ್ಯ ಹಾಗೂ ಲಕ್ಷ್ಮಿ ಆನೆಗಳು ಕುಮ್ಕಿ ಆನೆಗಳಾಗಿ ಸಾಗಲಿವೆ ಎಂದು ಮಾಹಿತಿ ನೀಡಿದರು.
ಇನ್ನು ಈ ಬಾರಿ ನಿಶಾನೆ ಆನೆಯಾಗಿ ಧನಂಜಯನನ್ನು ಆಯ್ಕೆ ಮಾಡಲಾಗಿದ್ದು, ನೌಫತ್ ಆನೆಯಾಗಿ ಗೋಪಿ ಸಾಗಲಿದ್ದಾನೆ. ಜಂಬೂಸವಾರಿಯಲ್ಲಿ 9 ಆನೆಗಳು ಭಾಗಿಯಾಗಲಿವೆ ಎಂದು ಮಾಹಿತಿ ನೀಡಿದರು.
ಕಳೆದ ಬಾರಿ ನಿಶಾನೆ ಆನೆಯಾಗಿ ಅರ್ಜುನ ಸಾಗಿದ್ದನು. ಆದರೆ ಕಾಡಾನೆ ದಾಳಿಯಲ್ಲಿ ಅರ್ಜುನ ವೀರಮರಣವನ್ನಪ್ಪಿದ ಹಿನ್ನೆಲೆಯಲ್ಲಿ ಈ ಬಾರಿ ಧನಂಜಯ ಆನೆಯನ್ನು ನಿಶಾನೆ ಆನೆಯಾಗಿ ಆಯ್ಕೆ ಮಾಡಲಾಗಿದೆ.