Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮೈಸೂರು ದಸರಾ: ಮಳೆಯ ಸಿಂಚನದ ನಡುವೆ 51 ಸ್ತಬ್ದಚಿತ್ರಗಳ ಪ್ರದರ್ಶನ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಮಳೆಯ ಸಿಂಚನದ ನಡುವೆಯೇ 51 ಸ್ತಬ್ದಚಿತ್ರಗಳು ಮೆರವಣಿಗೆಯಲ್ಲಿ ಸಾಗಿವೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದ ಬಳಿಕ ಸ್ತಬ್ದಚಿತ್ರ ಪ್ರದರ್ಶನ ಶುರುವಾಗಿದ್ದು, ಅನೀರಿಕ್ಷಿತವಾಗಿ ಮಳೆರಾಯನ ಆಗಮನವಾಗಿದೆ.

ಈ ಮಳೆಯ ನಡುವೆಯೂ ಸಾರ್ವಜನಿಕರು ಸ್ತಬ್ಧಚಿತ್ರಗಳು ಹಾಗೂ ಅಂಬಾರಿಯನ್ನು ವೀಕ್ಷಿಸಿ ಕಣ್ತುಂಬಿಕೊಳ್ಳಲು ಕಾತುರರಾಗಿ ಕಾಯುತ್ತಿದ್ದರು. ಅಲ್ಲದೇ ವಿವಿಧ ಕಲಾತಂಡಗಳು ಸಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಈ ಜಂಬೂಸವಾರಿ ಮೆರವಣಿಗೆಯಲ್ಲಿ 51 ಸ್ತಬ್ಧಚಿತ್ರಗಳು ಪ್ರದರ್ಶನಗೊಳುತ್ತಿದ್ದು, ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದೆ.

1. ಯಾದಗಿರಿ ಜಿಲ್ಲೆ- ತಿಂಥಣಿ ಮೌನೇಶ್ವರ ದೇವಾಲಯ
2. ಕೊಡಗು ಜಿಲ್ಲೆ- ಭೂ ಸಂರಕ್ಷಣೆ, ಹಾರಂಗಿ ಜಲಾಶಯ, ಕಾಫಿ-ಕಾಳುಮೆಣಸು ತೋಟ ಹಾಗೂ ಆನೆ ಕ್ಯಾಂಪ್‌
3. ರಾಯಚೂರು ಜಿಲ್ಲೆ-ಮುದ್ಗಲ್‌ ಕೋಟೆ ಮತ್ತು ಗಾಣದಾಳ ಪಂಚಮುಖಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ
4. ಚಾಮರಾಜನಗರ ಜಿಲ್ಲೆ-ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು
5. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ- ಕ್ಷೀರ ಭಾಗ್ಯ ಮತ್ತು ಕ್ಷೀರ ಸಂಜೀವಿನಿ ಯೋಜನೆಗಳ ಯಶಸ್ವಿ ಪಥ
6. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ-ಮೈಸೂರು ಸ್ಯಾಂಡಲ್‌ ಸೋಪ್‌ ಕಿರು ಪರಿಚಯ
7. ವಿಜಯನಗರ ಜಿಲ್ಲೆ-ವಿಜಯನಗರ ಸಾಮಾಜ್ರ್ಯದ ವೈಭವ
8. ಬೆಂಗಳೂರು ನಗರ ಜಿಲ್ಲೆ-ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ವಿಧಾನಸೌಧ
9. ಬೀದರ್‌ ಜಿಲ್ಲೆ-ಕನ್ನಡ ಪಟ್ಟದೇವರು ಪೂಜ್ಯ ಶ್ರೀಮದ್‌ ಘನಲಿಂಗ ಚಕ್ರವರ್ತಿ ಚೆನ್ನಬಸವ ಪಟ್ಟದೇವರು
10. ಕೊಪ್ಪಳ ಜಿಲ್ಲೆ-ಕಿನ್ನಾಳ ಕಲೆ, ಶ್ರೀ ಹುಲಿಗಮ್ಮದೇವಿ ದೇವಸ್ಥಾನ, ಹಿರೇಬೆಣಕಲ್‌ ಶಿಲಾ ಸಮಾಧಿ, ಇಟಗಿಯ ಮಹದೇವ ದೇವಾಲಯ
11. ಪ್ರವಾಸೋದ್ಯಮ ಇಲಾಖೆ-ಒಂದು ರಾಜ್ಯ ಹಲವು ಜಗತ್ತುಗಳು
12. ಡಾಕ್ಟರ್‌ ಬಾಬು ಜಗಜೀವನ್‌ ರಾಮ್‌ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ-ನಿಗಮದ ಉತ್ಪನ್ನಗಳ ಮಾದರಿ
13. ಉತ್ತರ ಕನ್ನಡ ಜಿಲ್ಲೆ-ಮುರುಡೇಶ್ವರದ ಬೃಹತ್‌ ಶಿವನ ಮೂರ್ತಿ
14. ಬೆಂಗಳೂರು ಗ್ರಾಮಾಂತರ ಜಿಲ್ಲೆ-ಪೊಕ್ಕುಂದ/ಹೆಗ್ಗುಂದದ ರಾಮದೇವರ ಬೆಟ್ಟ, ನಿಜಗಲ್ಲು ದುರ್ಗಾ, ಭಿನ್ನ ಮಂಗಲ ದೇವಸ್ಥಾನ
15. ದಾವಣಗೆರೆ ಜಿಲ್ಲೆ-ನಾವು ಮನುಜರು
16. ಕೋಲಾರ ಜಿಲ್ಲೆ-ವಿಶ್ವವಿಖ್ಯಾತ ಶ್ರೀ ಕೋಟಿಲಿಂಗೇಶ್ವರ ಸ್ವಾಮಿ ದೇವಸ್ಥಾನದ ಪರಿಚಯ
17. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ-ಕರ್ನಾಟಕ ರೇಷ್ಮೆ ನಮ್ಮ ಹೆಮ್ಮೆ
18. ಕಾರ್ಮಿಕ ಇಲಾಖೆ-ಕಾರ್ಮಿಕರ ಹಿತ ರಕ್ಷಣೆ
19. ಉಡುಪಿ ಜಿಲ್ಲೆ-ಸಾಂಸ್ಕೃತಿಕ ವೈಭವ ಹಾಗೂ ಕರಾವಳಿಯ ಸೊಬಗು
20. ಶಿವಮೊಗ್ಗ ಜಿಲ್ಲೆ -ಸೊರಬ ತಾಲೂಕಿನ ಕೋಟಿಪುರ ಕೈತಭೇಶ್ವರ ದೇವಾಲಯ
21. ಬಳ್ಳಾರಿ ಜಿಲ್ಲೆ- ಕುರುಗೋಡು ದೇವಸ್ಥಾನ
22. ಬಾಗಲಕೋಟೆ ಜಿಲ್ಲೆ-ರತ್ನನ ಕಾವ್ಯ ಗದಾಯುದ್ಧ
23. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ-ಗ್ರಾಮೀಣ ಜನರ ಆರೋಗ್ಯದಲ್ಲಿ ಸುಸ್ಥಿರತೆ ಸಾಧಿಸುವುದು
24. ಸಮಾಜ ಕಲ್ಯಾಣ ಇಲಾಖೆ-ಸಮ ಸಮಾಜ ನಿರ್ಮಾಣಕ್ಕಾಗಿ
25. ಹಾವೇರಿ ಜಿಲ್ಲೆ-ಏಲಕ್ಕಿ ಕಂಪಿನ ನಾಡು ಹಾಗೂ ಸಂತರ, ಸಾಹಿತಿಗಳ ನೆಲೆಬೀಡು
26. ಮಂಡ್ಯ ಜಿಲ್ಲೆ-ರಂಗನತಿಟ್ಟು ಪಕ್ಷಿಧಾಮ ಹಅಗೂ ಕೃಷ್ಣಸಾಗರ ಅಣೆಕಟ್ಟು
27. ರಾಮನಗರ ಜಿಲ್ಲೆ-ರಾಮನಗರ ಜಿಲ್ಲಾ ವೈವಿಧ್ಯತೆಗಳು
28. ಕಲಬುರ್ಗಿ ಜಿಲ್ಲೆ-ತೊಗರಿಯ ಕಣಜ ಕಲಬುರ್ಗಿ ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲು
29. ಕಾವೇರಿ ನೀರಾವರಿ ನಿಗಮ-ಏಕತೆಯಲ್ಲಿ ಅನೇಕತೆ ಸಾರುವ ಅಣೆಕಟ್ಟು ಹಾಗೂ ಜಲ ಸಂರಕ್ಷಣೆ
30. ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ-ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
31. ವಿಜಯಪುರ ಜಿಲ್ಲೆ-ಬಸವನಬಾಗೇವಾಡಿಯ ಮೂಲ ನಂದಿ ಬಸವೇಶ್ವರ ದೇವಾಲಯ
32. ದಕ್ಷಿಣ ಕನ್ನಡ ಜಿಲ್ಲೆ-ಕರಾವಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ
33. ಮೈಸೂರು ಜಿಲ್ಲೆ-ಮಾನವಕುಲದ ಸಮಾನತೆ, ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೆ
34. ಬೆಳಗಾವಿ ಜಿಲ್ಲೆ-ಕಿತ್ತೂರು ಕದನದ 200ನೇ ವರ್ಷಾಚರಣೆ
35. ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ-ಸಿಎಫ್‌ಟಿಐಆರ್‌ ಮೈಸೂರು-ಕೃಷಿ ಸರಕುಗಳ ಮೌಲ್ಯ ವರ್ಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಂಸ್ಥೆಯ ಕೊಡುಗೆ
36. ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ-ಇಲಾಖೆಯ ಕಿರು ಪರಿಚಯ
37. ಚಿತ್ರದುರ್ಗ ಜಿಲ್ಲೆ-ಚಿತ್ರದುರ್ಗದ ಕೋಟೆ ಮತ್ತು ಗಾಳಿಯಂತ್ರಗಳು
38. ಚಿಕ್ಕಬಳ್ಳಾಪುರ ಜಿಲ್ಲೆ-ನಂದಿರೋಪ್‌ ವೇ
39. ಗದಗ ಜಿಲ್ಲೆ-ಗ್ರಾಮ ಸಭೆ-ಹಳ್ಳಿಯ ವಿಧಾನಸಭೆ
40. ಧಾರಾವಾಡ ಜಿಲ್ಲೆ-ಇಸ್ರೋ ಗಗನಯಾನದಲ್ಲಿ ಹಣ್ಣಿನ ನೊಣಗಳು
41. ಭಾರತೀಯ ರೈಲ್ವೆ -ವಂದೇ ಭಾರತ್‌ ಎಕ್ಸ್‌ಪ್ರೆಸ್‌
42. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಹೆಣ್ಣು ಭ್ರೂಣಹತ್ಯೆ ತಡೆ ಅಂಧತ್ವ ಶ್ರವಣ ದೋಷ ನಿವಾರಣ ಕಾರ್ಯಕ್ರಮ
43. ಹಾಸನ ಜಿಲ್ಲೆ-ವಿಶ್ವ ಪಾರಂಪಾರಿಕ ತಾಣ ಬೇಲೂರು ಮತ್ತು ಹಳೇಬೀಡು
44. ಚಿಕ್ಕಮಗಳೂರು ಜಿಲ್ಲೆ-ತೇಜಸ್ವಿ ವಿಸ್ಮಯ ಲೋಕ
45. ತುಮಕೂರು ಜಿಲ್ಲೆ-ಔಷಧ ಸಸ್ಯಗಳ ಸಂಜೀವಿನಿ ಪರ್ವತ ಸಿದ್ದರಬೆಟ್ಟ ಮತ್ತು ಬಯಲು ಸೀಮೆಯನ್ನಾಳಿದ ಹೆಮ್ಮೆಯ ಅರಸರು
46. ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ-ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ಕಾರ್ಯಕ್ರಮಗಳು
47. ವಾರ್ತಾ ಇಲಾಖೆ-ವಿಶ್ವಗುರು ಬಸವಣ್ಣ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ
48. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ-ನಿಮ್ಮ ಮನೆಯೇ ನಿರಂತರ ಪಾಠಶಾಲೆ
49. ಕೌಶಲ್ಯಾಭಿವೃದ್ಧಿ ಇಲಾಖೆ-ಕೌಶಲ್ಯ ಕರ್ನಾಟಕ
50. ಸ್ತಬ್ಧಚಿತ್ರ ಉಪ ಸಮಿತಿ-ಸಾಮಾಜಿಕ ನ್ಯಾಯ
51. ಸ್ತಬ್ಧಚಿತ್ರ ಉಪಸಮಿತಿ-ಆನೆ ಬಂಡಿ
ಹೀಗೆ ಜಂಬೂಸವಾರಿಯಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿರುವ ಸ್ತಬ್ಧಚಿತ್ರಗಳು ಜನತೆಗೆ ಜಾಗೃತಿಯನ್ನು ಮೂಡಿಸಿ ಮನರಂಜನೆ ನೀಡುತ್ತಿವೆ.

Tags: