Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮೈಸೂರು ದಸರಾ ಉತ್ಸವದಲ್ಲಿ ಕಣ್ಮನ ಸೆಳೆದ ಶ್ವಾನಗಳು

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಮೈಸೂರಿನ ಜೆ.ಕೆ.ಮೈದಾನದಲ್ಲಿ ಆಯೋಜಿಸಿದ್ದ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯಲ್ಲಿ 45 ತಳಿಯ ಸುಮಾರು 480 ಶ್ವಾನಗಳು ಪಾಲ್ಗೊಂಡಿದ್ದವು.

ಜರ್ಮನ್‌ ಶೆಫರ್ಡ್‌, ಇಂಡಿಯನ್‌ ಮಸ್ಟಿಫ್‌, ಡಾಬರ್‌ ಮ್ಯಾನ್‌, ಪಿಟ್‌ ಬುಲ್‌, ಬಾಕ್ಸರ್‌ ಸೇರಿದಂತೆ ಅನೇಕ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

ಕಳೆದ ಬಾರಿ ದಸರಾದಲ್ಲಿ ಸುಮಾರು 20 ರಿಂದ 25 ತಳಿಗಳ ಶ್ವಾನಗಳು ಮಾತ್ರ ನೋಂದಣಿಯಾಗಿದ್ದವು. ಆದರೆ ಈ ಬಾರಿ 45 ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು ವಿಶೇಷವೆನಿಸಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಮುದ್ದು ಪ್ರಾಣಿಗಳು ನಮ್ಮ ಮಕ್ಕಳಿದ್ದಂತೆ. ಅವುಗಳನ್ನು ನಾವು ಪ್ರೀತಿಯಿಂದ ನೋಡಿಕೊಳ್ಳಬೇಕು. ಇಂತಹ ಶ್ವಾನಗಳ ಪ್ರದರ್ಶನದಿಂದ ಮಕ್ಕಳಲ್ಲಿ ಪ್ರಾಣಿಗಳ ಪ್ರೀತಿ ಹೆಚ್ಚಾಗುತ್ತದೆ ಎಂದರು.

 

 

Tags: