Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

Mysore Dasara 2024: ಯುವ ದಸರಾಗೆ ಚಾಲನೆ

ಮೈಸೂರು: ನಗರದಾದ್ಯಂತ ದಸರಾ ಸಂಭ್ರಮ ಕಳೆಗಟ್ಟಿದ್ದು, ಇಂದು ( ಅಕ್ಟೋಬರ್‌ 6 ) ಜನಪ್ರಿಯ ಯುವ ದಸರಾಗೆ ವಿದ್ಯುಕ್ತ ಚಾಲನೆ ದೊರಕಿದೆ.

ನಗರದ ಹೊರ ವಲಯದ ಉತ್ತನಹಳ್ಳಿ ಸಮೀಪದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಹಚ್ಚೇವು ಕನ್ನಡದ ದೀಪ ಹಾಡು ಹಾಡಿ, ದೀಪ ಬೆಳಗಿಸಿ, ಸಂವಿಧಾನ ಪೀಠಿಕೆ ಓದುವ ಮೂಲಕ ಚಾಲನೆ ನೀಡಲಾಯಿತು. ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಯುವ ದಸರಾವನ್ನು ಉದ್ಘಾಟಿಸಿ ನೆರೆದಿದ್ದ ಪ್ರೇಕ್ಷಕರಿಗೆ ಹಾಗೂ ನಾಡಿನ ಜನತೆಗೆ ನಾಡಹಬ್ಬ ದಸರೆಯ ಶುಭಾಶಯ ಕೋರಿದರು.

ಒಲಿದು ಬಾರೇ ಚಾಮುಂಡಿ ಒಲಿದು ಬಾರೇ ಬೆಟ್ಟದ ಚಾಮುಂಡಿ ಒಲಿದು ಬಾರೇ ಎಂಬ ಹಾಡಿನ ಮೂಲಕ ಚಾಮುಂಡೇಶ್ವರಿ ಪ್ರಾರ್ಥಿಸಲಾಯಿತು. ಬಣ್ಣ ಬಣ್ಣದ ಲೈಟ್‌ಗಳಿಂದ ಅಲಂಕೃತಗೊಂಡಿರುವ ಬೃಹತ್‌ ವೇದಿಕೆ ಎಲ್ಲರ ಗಮನ ಸೆಳೆಯಿತು.

ಯುವ ದಸರಾಗೆ ಚಾಲನೆ‌ ನೀಡಿದ ಬಳಿಕ ಜಿಲ್ಲಾ ಉಸ್ತುವರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ ಮೈಸೂರಿನ ಸಾಂಸ್ಕೃತಿಕ ಎತ್ತಿಹಿಡಿಯಲು ನಿಟ್ಟಿನಲ್ಲಿ ವಿಶಾಲವಾದ ವೇದಿಕೆಯಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದೆ. ಮಹಿಳೆಯರ ರಕ್ಷಣೆಗೆ ಒತ್ತು ನೀಡಲಾಗಿದ್ದು, ಪುರುಷರು ಅವರಿಗೆ ಗೌರವದಿಂದ ನಡೆದುಕೊಳ್ಳಬೇಕು. ಇಂದಿನಿಂದ ನಡೆಯುವ ಯುವ ದಸರೆಯಲ್ಲಿ ಪ್ರಜಾಸತ್ತಾತ್ಮಕ ನಡವಳಿಕೆ ಅಳವಡಿಸಿಕೊಳ್ಳುವ ನಿಟ್ಟಿನ ಕಾರ್ಯಕ್ರಮ ನಡೆಯಲಿದೆ. ಮೈಸೂರು ಪ್ರೀತಿ-ಪ್ರೇಮ, ಔದಾರ್ಯಕ್ಕೆ ಹೆಸರು ವಾಸಿಯಾಗಿದ್ದು, ಈ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಬೆಟ್ಟದ‌‌ ಮೇಲೆ ಚಾಮುಂಡಿ, ಇಲ್ಲಿ ಉತ್ತನಹಳ್ಳಿ ಮಾರಮ್ಮ, ಅಕ್ಕ-ತಂಗಿಯರ ಸಮ್ಮುಖದಲ್ಲಿ ಯುವ ದಸರಾ ಉದ್ಘಾಟನೆಗೊಂಡಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಾಗರೀಕರ ಮೇಲಿದೆ. ಅಕ್ಕ-ಪಕ್ಕದಲ್ಲಿನ ಜನತೆ ಸಹಕಾರ ನೀಡಬೇಕು.‌ ವಿದ್ಯಾರ್ಥಿಗಳು, ಯುವ ಸಮೂಹ ಮೈಸೂರಿನ ಗೌರವ ಉಳಿಸುವ ನಿಟ್ಟಿನಲ್ಲಿ ವರ್ತಿಸಬೇಕು. ಪೊಲೀಸರು ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಹೇಳಿದರು.

Tags: