Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಜಂಬೂಸವಾರಿ ಮೆರವಣಿಗೆ: ʻಸತ್ತಿಗೆ ಕುಣಿತʼ ಕಲಾತಂಡಕ್ಕೆ ಪ್ರಥಮ ಬಹುಮಾನ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಭಾಗವಹಿಸಿ, ಪ್ರದರ್ಶನ ನೀಡಿದ ಉತ್ತಮ ಕಲಾ ತಂಡಗಳಿಗೆ ಬಹುಮಾನ ಘೋಷಿಸಲಾಗಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸಿದ್ದರಾಪುದ ಸಂಜೀತ ಸಿ.ಕೋತ ನೇತೃತ್ವದ ರೇವಣ್ಣಸಿದ್ದೇಶ್ವರ ಯುವಕರ ಕಲಾಸಂಘದ ಸತ್ತಿಗೆ ಕುಣಿತಕ್ಕೆ ಪ್ರಥಮ ಬಹುಮಾನ ದೊರೆತಿದೆ. ಈ ಬಹುಮಾನವು 15ಸಾವಿರವನ್ನು ಒಳಗೊಂಡಿದೆ.

ಯಾದಗಿರಿಯ ವಿಶ್ವಾಸಪುರ ತಾಂಡಾದ ಮನೋಹರ ಖೇಮು ಪವಾರ ನೇತೃತ್ವದ ಲಂಬಾಣಿ ನೃತ್ಯ ಕಲಾತಂಡ, ಮಂಡ್ಯ ಜಿಲ್ಲೆಯ ಮದ್ದೂರಿನ ಕ್ಯಾತಘಟ್ಟದ ಕೀರ್ತಿನಿ ಮತ್ತು ಪ್ರಮೋದಿನಿ ನೇತೃತ್ವದ ಪೂಜಾಕುಣಿತ ಕಲಾವಿದರ ತಂಡ, ಮದ್ದೂರಿನ ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ಯುವಕರ ತಂಡಗಳು ದ್ವಿತೀಯ ಸ್ಥಾನ ಪಡೆದು ತಲಾ 5 ಸಾವಿರು ನಗದು ಬಹುಮಾನ ಗಳಿಸಿದೆ.

ಹಾವೇರಿ ಜಿಲ್ಲೆಯ ವೀರಭದ್ರೇಶ್ವರ ಪುರವಂತಿಕೆ ಕಲಾತಂಡ ಹಾಗೂ ಕೋಲಾರ ಜಿಲ್ಲೆಯ ಸುಳದೇನಹಳ್ಳಿಯ ಮಾರುತಿ ಕಲಾವಿದರ ಸಂಘದ ಗಾರುಡಿ ಗೊಂಬೆ ತೃತೀಯ ಬಹುಮಾನ ಪಡೆದು, ತಲಾ 2.500 ಪಡೆದಿವೆ ಎಂದು ದಸರಾ ಮೆರವಣಿಗೆ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಸೀಮಾ ಲಾಟ್ಕಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Tags: