Mysore
22
clear sky

Social Media

ಮಂಗಳವಾರ, 24 ಮಾರ್ಚ್ 2026
Light
Dark

ವಿಶ್ವವಿಖ್ಯಾತ ವಿಜಯದಶಮಿ ಜಂಬೂಸವಾರಿಗೂ ಮುನ್ನವೇ ಗಜಪಡೆ ಫೋಟೋಶೂಟ್‌

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ವಿಶ್ವವಿಖ್ಯಾತ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವುದಕ್ಕಿಂತೂ ಮುಂಚೆ ಗಜಪಡೆ ಫೋಟೋಶೂಟ್‌ನಲ್ಲಿ ಭಾಗಿಯಾಗಿದ್ದವು.

ಈ ಬಾರಿಯು ಜಂಬೂಸವಾರಿಯಲ್ಲಿ ಕ್ಯಾಪ್ಟನ್‌ ಅಭಿಮನ್ಯು ಅಂಬಾರಿಯನ್ನು ಹೊತ್ತು ರಾಜ ಬೀದಿಗಳಲ್ಲಿ ಸಾಗಲಿದ್ದು, ಅಭಿಮನ್ಯುವಿಗೆ ಒಂಭತ್ತು ಆನೆಗಳು ಸಾಥ್‌ ನೀಡಲಿವೆ. ಜೊತೆಗೆ ನಿಶಾನೆ ಆನೆ ಧನಂಜಯ ಕೂಡ ಫೋಟೋಗೆ ಫೋಸ್‌ ನೀಡಿದೆ.

ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯ ಹಿನ್ನೆಲೆಯಲ್ಲಿ ಇಂದು ಅರಮನೆ ಆವರಣದಲ್ಲಿ ಗಜಪಡೆಗಳಿಗೆ ವಿವಿಧ ಬಣ್ಣಗಳಿಂದ ಅಲಂಕಾರ ಮಾಡಲಾಗಿತ್ತು. ಬಳಿಕ ಮಧ್ಯಾಹ್ನದ ವೇಳೆಗೆ ದಸರಾ ಗಜಪಡೆ ಫೋಟೋಶೂಟ್‌ನಲ್ಲಿ ಭಾಗಿಯಾಗಿದ್ದವು. ಈ ವೇಳೆ ಪೊಲೀಸರು ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.

Tags:
error: Content is protected !!