Mysore
20
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದಸರಾ ಚಲನಚಿತ್ರೋತ್ಸವ 2024 – ಸಿನಿಮಾ ಸಮಯ ಮ್ಯಾಗಜೀನ್ ಬಿಡುಗಡೆ

ಮೈಸೂರು: ದಸರಾ ಚಲನಚಿತ್ರೋತ್ಸವ 2024 ರ ಸಂಬಂಧ  ಚಲನಚಿತ್ರೋತ್ಸವ ಉಪ ಸಮಿತಿಯ ವತಿಯಿಂದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದಲ್ಲಿ ಸೋಮವಾರ ಸಿನಿಮಾ ಸಮಯ ದೈನಂದಿನ ಮ್ಯಾಗಜಿನ್ ಬಿಡುಗಡೆಯಾಯಿತು.

ಈ ಸಂದರ್ಭದಲ್ಲಿ ಉಪ ಸಮಿತಿಯ ಉಪ ವಿಶೇಷಾಧಿಕಾರಿಗಳಾದ ಡಾ.ಬಸವರಾಜು ಕೆ.ಎನ್. ಸಮಿತಿಯ ಕಾರ್ಯಾಧ್ಯಕ್ಷರಾದ ರಂಗೇಗೌಡ, ಸಮಿತಿಯ ಕಾರ್ಯದರ್ಶಿ ಹರೀಶ್ ಟಿ.ಕೆ. ಹಾಗೂ ಕಲಾತ್ಮಕ ನಿರ್ದೇಶಕ ಮನು ಹಾಗೂ ಇತರರು ಉಪಸ್ಥಿತರಿದ್ದರು.

ಸಿನಿಮಾ ಸಮಯ- ದಸರ ಚಲನಚಿತ್ರೋತ್ಸವದ ಕೈಗನ್ನಡಿ

ʻಸಿನಿಮಾ ಸಮಯ’ವು ಮೈಸೂರು ದಸರಾ ಚಲನಚಿತ್ರೋತ್ಸವದ ನಿತ್ಯ ಅವತರಣಿಕೆಯಾಗಿದ್ದು,
ಚಿತ್ರೋತ್ಸವದ ದಿನಗಳಲ್ಲಿ ಯಾವೆಲ್ಲಾ ಚಿತ್ರಗಳು ಯಾವ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು ಎನ್ನುವುದನ್ನು ತಿಳಿಸುತ್ತದೆ.

ಕನ್ನಡ ಹಾಗೂ ವಿಶ್ವದ ಹಲವು ಭಾಷೆ ಹಾಗೂ ಪ್ರಕಾರಗಳ ಚಲನಚಿತ್ರ ಪ್ರದರ್ಶನ ಮತ್ತು ಅದರ ಬಗ್ಗೆ ಪ್ರೇಕ್ಷಕರ ಅಭಿಪ್ರಾಯ, ಸಿನೆಮಾ ತಂಡದವರಿಂದ ಅಭಿಪ್ರಾಯ ಹೀಗೆ ಅನೇಕ ವಿಚಾರಗಳನ್ನು ಪ್ರಕಟಿಸುತ್ತದೆ. ಚಿತ್ರೋತ್ಸವದಲ್ಲಿ ನಿತ್ಯವೂ ಏನೆಲ್ಲಾ ನಡೆಯುತ್ತದೆ ಎನ್ನುವುದನ್ನು ಪ್ರೇಕ್ಷಕರಿಗೆ ತಿಳಿಸುವುದು ಈ ಮ್ಯಾಗಜೀನ್ ಮೂಲ ಉದ್ದೇಶವಾಗಿದೆ.

Tags: