Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಯುವ ದಸರಾಗೆ ಕ್ಷಣಗಣನೆ: ಭದ್ರತೆಗೆ 1,239 ಪೊಲೀಸರ ನಿಯೋಜನೆ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳೊಂದಾದ ಯುವ ದಸರಾವು ಇಂದಿನಿಂದ ಶುರುವಾಗಲಿದೆ. ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಚಾಲನೆ ನೀಡಲಿದ್ದು, ಖ್ಯಾತ ಗಾಯಕಿ ಶ್ರೇಯಾ ಘೋಷಲ್‌ ಗಾನಸುಧೆ ಹರಿಸಲಿದ್ದಾರೆ.

ಇದೇ ಮೊದಲ ಬಾರಿಗೆ ನಗರದ ಹೊರಹೊಲಯ ಉತ್ತನಹಳ್ಳಿ ಬಳಿ ತ್ರಿಪುರಸುಂದರಿ ಜ್ವಾಲಾಮುಖಿ ದೇವಾಲಯ ಸಮೀಪದ ಮೈದಾನದಲ್ಲಿ ನಡೆಯಲಿರುವ ಆರು ದಿನಗಳ ಯುವ ದಸರಾವು, ಯುವಜನತೆಯನ್ನು ಕುಣಿದು ಕುಪ್ಪಳಿಸುವಂತೆ ಮಾಡಲಿದೆ.

ಇಂದು(ಅ.6) ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್‌ ಅವರ ತಂಡದಿಂದ ಬಾಲಿವುಡ್‌ ನೈಟ್ಸ್‌ ನಡೆಯಲಿದೆ. ಆ.7ರಂದು ಖ್ಯಾತ ಸಂಗೀತ ಸಂಯೋಜಕ ರವಿ ಬಸ್ರೂರು ತಂಡದಿಂದ ರಸಸಂಜೆ ಹಾಗೂ ಸ್ಯಾಂಡಲ್‌ವುಡ್‌ ಕಾರ್ಯಕ್ರಮ, ಅ.8 ರಂದು ಖ್ಯಾತ ರ್ಯಾಪರ್‌ ಬಾದ್‌ ಷಾ ತಂಡದಿಂದ ಸಂಗೀತ ರಸಸಂಜೆ, ಅ.9 ಸಂಗೀತ ನಿರ್ದೇಶಕ ಎ.ಆರ್‌ ರೆಹಮಾನ್‌ ತಂಡದಿಂದ ಸಂಗೀತ ರಸಸಂಜೆ, ಅ.10 ರಂದು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಂದ ಸಂಗೀತ ರಸಸಂಜೆ ನಡೆಯಲಿದೆ.

ಭದ್ರತೆಗೆ 1239 ಪೊಲೀಸರ ನಿಯೋಜನೆ
ಯುವ ದಸರಾ ಭದ್ರತೆಗಾಗಿ 4 ಎಸ್‌.ಪಿ,12ಡಿಎಸ್‌ಪಿ,37ಸಿಪಿಐ,76 ಪಿಎಸ್‌ಐ, 110 ಎಎಸ್‌ಐ, 600ಹೆಡ್‌ಕಾನ್‌ಸ್ಟೆಬಲ್‌,  ಕಾನ್ಸ್ಟೆಬಲ್‌, 100ಮಹಿಳಾ ಪೊಲೀಸ್‌ ಹಾಗೂ 300 ಹೋಂ ಗಾರ್ಡ್‌ ಗಳನ್ನು ನಿಯೋಜಿಸಲಾಗಿದೆ.

ಸಂಚಾರ ದಟ್ಟನೆ ನಿಯಂತ್ರಣಕ್ಕೆ ಇಬ್ಬರು ಇನ್ಸ್‌ಸ್ಪೆಕ್ಟರ್‌, 6 ಸಬ್‌ಇನ್ಸ್‌ಪೆಕ್ಟರ್‌, 10ಎಎಸ್‌ಐ, 50 ಕಾನ್ಸ್‌ಸ್ಟೆಬಲ್‌ಗಳನ್ನು ನೇಮಿಸಲಾಗಿದೆ. ಇದರೊಂದಿಗೆ 6 ಕೆಎಸ್‌ಆರ್‌ಪಿ, 10 ಡಿಎಆರ್‌, 10ಎಎಸ್‌ಸಿ ತಂಡ, 2 ಆಂಬುಲೆನ್ಸ್‌, 2ಅಗ್ನಿಶಾಮಕ ವಾಹಾನ, ಒಂದು ಮೊಬೈಲ್‌ ಕಮಾಂಡೋ ವಾಹನ ಇರಲಿದೆ.

ಜತೆಗೆ ಮಹಿಳೆಯರ ಸುರಕ್ಷತೆಗೂ ವಿಶೇಷ ಒತ್ತು ನೀಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಯುವ ದಸರಾಗೆ ಮಳೆ ಅಡ್ಡಿಯಾಗುವ ಆತಂಕ
ನಗರದಲ್ಲಿ ಎರಡು ದಿನಗಳಿಂದ ಸಂಜೆ ವೇಳೆ ಜೋರು ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇನ್ನೂ ಮೂರು ದಿನಗಳವರೆಗೆ ಮಳೆಯಾಗಲಿದೆ ಎಂಬ ವರದಿ ಇದೆ. ಇದು ಯುವ ದಸರೆಯಲ್ಲಿ ಕುಣಿದು ಕುಪ್ಪಳಿಸಲು ಬರುವವರಲ್ಲಿ ಆತಂಕ ಮೂಡಿಸಿದೆ.

 

 

Tags: