Mysore
18
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ವಾಟರ್‌ ಬಿಲ್‌ ಹಣ ಗುಳುಂ ಪ್ರಕರಣ: ನೌಕರರನ್ನು ವಜಾಗೊಳಿಸಿದ ಪಾಲಿಕೆ ಆಯುಕ್ತ

ಮೈಸೂರು: ಮೈಸೂರು ನಗರ ಪಾಲಿಕೆ ನೀರಿನ ಬಿಲ್‌ ಬಾಕಿ ಗುಳುಂ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಕೆಲಸಗಾರರನ್ನು ವಜಾ ಮಾಡಿ ಹಾಗೂ 15 ಮಂದಿ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಪಾಲಿಕೆ ಆಯುಕ್ತ ಅಸಾದ್‌ ಉರ್‌ ರೆಹಮಾನ್‌ ಷರೀಫ್ ಆದೇಶ ಹೊರಡಿಸಿದ್ದಾರೆ.

ವಾಟರ್‌ ಇನ್ಸ್‌ಪೆಕ್ಟರ್‌ಗಳಾದ ಚನ್ನೇಗೌಡ, ಕೆ.ಮಹೇಶ್‌, ಎನ್‌.ಮೋಹನ್‌, ಮೀಟರ್‌ ರೀಡರ್‌ಗಳಾದ ವೆಂಕಟೇಶ್ ಮತ್ತು ಸೈಫುಲ್ಲಾ ಎಂಬುವವರೇ ವಜಾಗೊಂಡ ನೌಕರರಾಗಿದ್ದಾರೆ.

ಸಾರ್ವಜನಿಕರಿಂದ ನೀರಿನ ಬಿಲ್‌ ಸಂಗ್ರಹಿಸಿ ಅದನ್ನು ಪಾಲಿಕೆ ಖಾತೆಗೆ ಜಮಾ ಮಾಡದೇ ನೌಕರರು ಹಣ ಗುಳುಂ ಮಾಡಿದ್ದರು.

ಇದರ ಜೊತೆಗೆ ಸಾರ್ವಜನಿಕರಿಗೆ ನಕಲಿ ಬಿಲ್‌ ರಸೀದಿ ನೀಡುತ್ತಿದ್ದರು. ಈ ಸಂಬಂಧ ಎಲ್ಲಾ ಕಡೆ ದೂರು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿ ಕೆ.ಜೆ.ಸಿಂಧು ಅವರು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಷರೀಫ್‌ ಅವರು, ಈ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!