Mysore
30
few clouds

Social Media

ಬುಧವಾರ, 28 ಜನವರಿ 2026
Light
Dark

ಮತಗಳ್ಳತನ ಆರೋಪ ವಿಚಾರ: ರಾಹುಲ್‌ ಗಾಂಧಿ ಪ್ರಸ್ತಾಪವೆಲ್ಲಾ ನಿಜ ಎಂದ ಸಿದ್ದರಾಮಯ್ಯ

cm siddaamaiah

ಮೈಸೂರು: ಮತಗಳ್ಳತನ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ರಾಹುಲ್‌ ಗಾಂಧಿ ಪ್ರಸ್ತಾಪ ಮಾಡಿದ್ದೆಲ್ಲಾ ನಿಜ ಎಂದು ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ 16 ಸ್ಥಾನ ಗೆಲ್ಲುತ್ತೇವೆ ಎಂಬ ಸರ್ವೆ ಇತ್ತು. ರಾಹುಲ್ ಗಾಂಧಿ ಅವರು ಹೇಳಿರುವುದು ಚುನಾವಣೆ ಆಯೋಗದಲ್ಲಿ ದೊರೆಯುತ್ತಿದೆ. ಆಯೋಗದ ದಾಖಲಾತಿಗಳನ್ನೇ ರಾಹುಲ್ ಗಾಂಧಿ ಪ್ರಸ್ತಾಪ ಮಾಡಿದ್ದಾರೆ. 80 ಮಂದಿ ಒಂದೇ ರೂಮ್‌ನಲ್ಲಿ ವಾಸವಿರಲು ಸಾಧ್ಯವೇ? ಒಂದೇ ರೂಮ್‌ನಲ್ಲಿದ್ದವರು ಸಹ ವೋಟ್ ಮಾಡಿದ್ದಾರೆ.

ಚುನಾವಣೆ ಮುಗಿದು ಇಲ್ಲಿಯವರೆಗೂ ನಾವು ರಿಸರ್ಚ್ ಮಾಡುತ್ತಿದ್ದೆವು. ರಿಸರ್ಚ್ ಮಾಡಿದ ಮೇಲೆ ನಮಗೆ ಗೊತ್ತಾಗಿದೆ. ಈ ಹಿಂದಿನಿಂದಲೂ ಇವಿಎಂ ಹಾಗೂ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಆದ್ದರಿಂದ ಮಾಧ್ಯಮಗಳ ಮುಂದೆ ರಾಹುಲ್ ಗಾಂಧಿ ಪ್ರಸ್ತಾಪ ಮಾಡಿರುವುದೆಲ್ಲವೂ ನಿಜ. ಸತ್ತವರು ವೋಟ್ ಮಾಡಿದ್ದರೆ ಅದಕ್ಕೆ ಚುನಾವಣಾ ಆಯೋಗ ನೇರ ಹೊಣೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಮುಂದಿನ ಬಿಬಿಎಂಪಿ ಚುನಾವಣೆವರೆಗೆ ಮತದಾರರ ಪಟ್ಟಿ ಪರಿಶೀಲಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಈ ಬಗ್ಗೆ ಲೀಗಲ್ ಟೀಮ್‌ಗೆ ತಿಳಿಸಿದ್ದು, ಲೀಗಲ್ ಟೀಮ್‌ನವರು ಪರಿಶೀಲಿಸುತ್ತಿದ್ದಾರೆ. ಏನು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿದಿಯೋ ಅದನ್ನು ತೆಗೆದುಕೊಳ್ಳುತ್ತೇವೆ. ಲೀಗಲ್ ಟೀಮ್ ಶಿಫಾರಸಿನ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕೆಲಸವನ್ನು ತ್ವರಿತಗತಿಯಲ್ಲಿ ಮಾಡುತ್ತೇವೆ ಎಂದರು.

ಇನ್ನು ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ವೋಟ್ ಖರೀದಿಸಿ ಗೆದ್ದಿದ್ದಾರೆ ಎಂಬ cm ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಾದಾಮಿಗೆ ನಾನು ಹೋಗಿದ್ದೆ 2 ದಿನ ಮಾತ್ರ. ನಾಮಪತ್ರ ಸಲ್ಲಿಸಲು ಒಂದು ದಿನ ಹಾಗೂ ಪ್ರಚಾರಕ್ಕೆಂದು ಒಂದು ದಿನ ಹೋಗಿದ್ದೆ ಅಷ್ಟೇ. ಇಬ್ರಾಹಿಂ ಹೇಳುವ ಬಗ್ಗೆ ನನಗೆ ಗೊತ್ತಿಲ್ಲ. ಇದು ಹೊಸ ವಿಚಾರ, ನನಗೆ ಈ ಬಗ್ಗೆ ಗೊತ್ತೇ ಇಲ್ಲ. ಅದನ್ನು ನೀವೇ ಕೇಳಬೇಕು ಎಂದರು.

Tags:
error: Content is protected !!