Mysore
15
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಸೈಟ್ ವಾಪಸ್ ಕೊಡಲಿಲ್ಲ ಅಂದ್ರೆ ಭ್ರಷ್ಟಾಚಾರ ನಿಮ್ಮ ಚಿರಸ್ಥಾಯಿಯಾಗಿ ಉಳಿಯುತ್ತೆ : ಸಿಎಂ ವಿರುದ್ಧ ಹಳ್ಳಿಹಕ್ಕಿ ವಾಗ್ದಾಳಿ

ಮೈಸೂರು: ಸಿಎಂ ಸಿದ್ದರಾಮಯ್ಯ ತಮಗೆ ೬೨ ಕೋಟಿ ಬರಬೇಕು ಅಂತಾರೆ ನನಗೆ ಅರ್ಥವಾಗ್ತಿಲ್ಲ. ಇದು ಯಾವ ತರಹದ ಲೆಕ್ಕ. ೬೨ ಕೋಟಿ ರೂ ಅನ್ನೋದು ಕಡ್ಲೆ ಕಾಯಿ ಬೀಜವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್‌ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಯಾಕೆ ಮಣ್ಣಿನ ಹಿಂದೆ ಹೋಗುತ್ತಿದ್ದಾರೆ ಗೊತ್ತಿಲ್ಲ. ಹಣಕಾಸು ಸಚಿವರಾದ್ರೂ ಹೀಗೆ ಮಾತನಾಡಿದ್ರೆ ಹೇಗೆ..? ಸಿಎಂ ಸಿದ್ದರಾಮಯ್ಯ ತಮಗೆ ಬಂದಿರುವ ಜಾಗವನ್ನು ಸರ್ಕಾರಕ್ಕೆ ವಾಪಸ್‌ ಕೊಡಲಿ. ಅದೇ ಜಾಗದಲ್ಲಿ ಒಂದು ಆಸ್ಪತ್ರೆ ಕಟ್ಟಿಸಿ ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಇಲ್ಲದೆ ಇದ್ದರೆ ನಿಮ್ಮ ಭ್ರಷ್ಟಾಚಾರ ಚಿರಸ್ಥಾಯಿಯಾಗಿ ಉಳಿಯುತ್ತೆ. ಯಾಕೆ ಮಾನ ಮರ್ಯಾದೆ ಬೀದಿ ಬೀದಿಯಲ್ಲಿ ಕಳೆದು ಕೊಳ್ತಾ ಇದ್ದೀರಾ. ಈ ಹಗರಣ  ನ್ಯಾಯಾಂಗ ತನಿಕೆಗೆ ಒಪ್ಪಿಸಿ ಅಂತ ನಿಮ್ಮ ಶಿಷ್ಯರು ಸಲಹೆ ಕೊಡುತ್ತಿದ್ದಾರೆ. ನ್ಯಾಯಾಂಗ ತನಿಖೆಯಿಂದ ಯಾವ ಪ್ರಯೋಜನವಿಲ್ಲ. ಈ ಹಗರಣ ಸಿಬಿಐಗೆ ಕೊಡಿ ಸಾವಿರಾರು ಕೋಟಿ ರೂ ಹಗರಣ ಇದು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಪತ್ನಿ ಖರೀದಿಸಿರುವ ದೇವನೂರು ಬಡಾವಣೆ ಜಾಗ ದಲಿತರಿಗೆ ಸೇರಿದ್ದು, ಜವರ ಎಂಬ ವ್ಯಕ್ತಿಗೆ ಸೇರಿದ ಜಮೀನು ಇದು. ಡಿನೋಟಿಫೈ ಆದ ಜಾಗವನ್ನು ಸಿಎಂ ಪತ್ನಿಯ ಅಣ್ಣ ಖರೀದಿ ಮಾಡಿದ್ದರಿ. ದಾನ ಪತ್ರವಾಗಿ ೨೦೧೦ ರಲ್ಲಿ ಸಿಎಂ ಪತ್ನಿ ಹೆಸರಿಗೆ ಬಂದಿದೆ. ಸಮಾಜವಾದಿ ಮನಸ್ಸಿನ ಸಿದ್ದರಾಮಯ್ಯ ಯಾಕೆ ಈ ರೀತಿ ಮಣ್ಣಿನ ಹಿಂದೆ ಹೋಗುವ  ರೀತಿ ಬದಲಾವಣೆ ಆದ್ರು..? ನೀವು ನಿಮ್ಮ ಅವಧಿಯಲ್ಲಿ ಒಂದು ಸೈಟ್‌ ಆದ್ರು ಜನಸಾಮಾನ್ಯರಿಗೆ ಕೊಡಿಸಿದ್ದೀರಾ ಎಂದು ಸಿಎಂ ವಿಶ್ವನಾಥ್‌ ಪ್ರಶ್ನೆ ಮಾಡಿದರು.

Tags:
error: Content is protected !!