Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಚಾಮುಂಡಿಬೆಟ್ಟದ ಅನ್ನದಾಸೋಹ ಭವನಕ್ಕೆ ವಿ-ಗಾರ್ಡ್‌ ಕಂಪನಿಯಿಂದ ಉಚಿತ ಶುದ್ಧ ನೀರಿನ ಘಟಕ ಸಮರ್ಪಣೆ

ಮೈಸೂರು: ಚಾಮುಂಡಿಬೆಟ್ಟದ ಅನ್ನದಾಸೋಹ ಭವನಕ್ಕೆ ವಿ-ಗಾರ್ಡ್‌ ಕಂಪನಿಯಿಂದ ಉಚಿತ ಶುದ್ಧ ಕುಡಿಯುವ ನೀರಿನ ಘಟಕದ ಆರ್‌ಓ ಪ್ಲಾಂಟ್‌ನ್ನು ಸಮರ್ಪಣೆ ಮಾಡಲಾಯಿತು.

ಚಾಮುಂಡಿಬೆಟ್ಟಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕದ ಅವಶ್ಯಕತೆಯಿತ್ತು. ಹೀಗಾಗಿ ಇದನ್ನು ಮನಗಂಡ ವಿ-ಗಾರ್ಡ್‌ ಕಂಪನಿ ಇಂದು ಅನ್ನದಾಸೋಹ ಭವನಕ್ಕೆ ಉಚಿತವಾಗಿ ಶುದ್ಧ ನೀರಿನ ಘಟಕವನ್ನು ಸಮರ್ಪಣೆ ಮಾಡಿದೆ.

ಚಾಮುಂಡೇಶ್ವರಿ ಕೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು, ಚಾಮುಂಡಿ ಬೆಟ್ಟಕ್ಕೆ ಮೂಲಭೂತ ಸೌಕರ್ಯಗಳನ್ನು ಶಾಶ್ವತವಾಗಿ ಒದಗಿಸುವಂತೆ ಖಾಸಗಿ ಕಂಪನಿಯವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ವಿ-ಗಾರ್ಡ್‌ ಆರ್‌ಓ ಪ್ಲಾಂಟ್‌ ಶುದ್ಧ ಕುಡಿಯುವ ನೀರಿನ ಘಟಕವನ್ನು ವಿ-ಗಾರ್ಡ್‌ ಕಂಪನಿಯ ಉಪಾಧ್ಯಕ್ಷ ಸೂರ್ಯಪ್ರಕಾಶ್‌, ಶಾಖೆ ವ್ಯವಸ್ಥಾಪಕ ಹರ್ಷೇಂದ್ರ ಪ್ರಸಾದ್‌ ಅವರು ಹಸ್ತಾಂತರಿಸಿದರು.

ಬಳಿಕ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್‌ ದೀಕ್ಷಿತ್‌ ಅವರು, ಹೊಸ ಕುಡಿಯುವ ನೀರಿನ ಘಟಕಕ್ಕೆ ಪೂಜೆ ಸಲ್ಲಿಸಿ ವಿ ಗಾರ್ಡ್‌ ಕಂಪನಿಗೆ ಹಾರೈಸಿದರು.

 

Tags: