Mysore
22
mist

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ದಸರಾ ಉದ್ಘಾಟಕರ ಬಗ್ಗೆ ಕೇಂದ್ರ ಸಚಿವ ವಿ.ಸೋಮಣ್ಣ ಆಕ್ಷೇಪ

somanna

ಮೈಸೂರು: ನಂಬಿಕೆಗೆ ಮತ್ತೊಂದು‌ ಹೆಸರು ಚಾಮುಂಡಿ ಬೆಟ್ಟ. ಆದರೆ ರಾಜ್ಯ ಸರ್ಕಾರ ಪದೇ ಪದೇ ಯಡವಟ್ಟು ಮಾಡುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ನಾನೂ ಕೂಡ ಒಂದು ಬಾರಿ ಉಸ್ತುವಾರಿ ಸಚಿವನಾಗಿ ದಸರಾ ನಿರ್ವಹಿಸಿದ್ದೇನೆ. ನಂಬಿಕೆಗೆ ಮತ್ತೊಂದು‌ ಹೆಸರು ಚಾಮುಂಡಿ ಬೆಟ್ಟ. ಆದರೆ ರಾಜ್ಯ‌ ಸರ್ಕಾರ ಪದೇ ಪದೇ ಯಡವಟ್ಟು ಮಾಡ್ತಿದೆ.

ಇದನ್ನು ಓದಿ:ಬಾನು ಮುಷ್ತಾಕ್ ದಸರಾ ಉದ್ಘಾಟಿಸಲು ವಿರೋಧವೇಕೆ?

ಸಾಮಾಜಿಕ,‌ ಧಾರ್ಮಿಕವಾಗಿ ಪೂರ್ವಜರು‌ ನೀಡಿದ ರೀತಿ ನಡೆದುಕೊಳ್ಳಿ. ಯಾರನ್ನೋ ತೃಪ್ತಿಪಡಿಸಲು ಈ ರೀತಿ ಮಾಡುವುದು ಸರಿಯಲ್ಲ. ಯಾರನ್ನ ಮಾಡಿದ್ದೀರಿ ಅವರಿಗೆ ತಾಯಿಯ ಮೇಲೆ ಗೌರವ ಇರಬೇಕು. ಅವರು ಎಷ್ಟರ ಮಟ್ಟಿಗೆ ಅರ್ಹರು ಎಂಬುದನ್ನು ಚರ್ಚಿಸಲ್ಲ. ಸರ್ಕಾರ ಉದ್ಘಾಟಕರ ವಿಚಾರದಲ್ಲಿ ಗೊಂದಲ ಮಾಡಬಾರದು. ರಾಜ್ಯ ಸರ್ಕಾರ ಶಿಷ್ಠಾಚಾರವನ್ನು ಪಾಲಿಸಬೇಕು. ಸರ್ಕಾರಕ್ಕೆ ಸದ್ಭುದ್ಧಿ‌ ಕೊಡಲಿ ಎಂದು ಬೇಡಿಕೊಳ್ತೀನಿ. ತಾಯಿ ಮನಸು‌ ಗೆದ್ದರೆ ರಾಜ್ಯಕ್ಕೂ‌ ಒಳಿತು, ಸರ್ಕಾರಕ್ಕೂ ಒಳಿತು ಎಂದು ಹೇಳಿದರು.

ಇನ್ನು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಾವಿರ ಸರಿ ಸುಳ್ಳು ಹೇಳಿದರೂ ಸತ್ಯ ಆಗಲ್ಲ. ಈ ಮಾತಿಗೆ ಧರ್ಮಸ್ಥಳ ಪ್ರಕರಣವೇ ತಾಜ ನಿದರ್ಶನ. ಯಾರ್ ಯಾರೋ‌, ಏನ್ ಏನೋ‌ ಹೇಳಿದ್ರು. ಆದರೆ ಸತ್ಯ ಏನು ಅಂತ ಹೊರಗೆ ಬಂದಿದೆ. ಎಸ್‌ಐಟಿ‌ ರಚನೆಯಾದಾಗ ಮೊದಲು ಸ್ವಾಗತಿಸಿದ್ದೆ ನಾನು. ಧರ್ಮಸ್ಥಳಕ್ಕೆ ಅಂಟಿರುವ ಕಳಂಕ ದೂರವಾಗುತ್ತಿದೆ. ಅಣ್ಣಪ್ಪಸ್ವಾಮಿ, ಮಂಜುನಾಥಸ್ವಾಮಿ ಕೆಡಕು ಬಯಸಿದರೆ ಸದ್ಭುದ್ಧಿ ಕೊಡಲಿ. ಆ ದೇವರಿಗೆ ನಮ್ಮ ಪ್ರಣಾಮಗಳು. ಈಗ ಆಗಿರುವುದೇ ಸಾಕು. ಸರ್ಕಾರ ಪಶ್ಚಾತ್ತಾಪ ಪಟ್ಟುಕೊಳ್ಳಲಿ. ಮುಂದೆಯಾದರೂ ಧಾರ್ಮಿಕ ತಾಣಗಳ ಬಗ್ಗೆ ಯಾರೇ ಮಾತನಾಡುವಾಗಲೂ ಎಚ್ಚರಿಕೆ ವಹಿಸಬೇಕು. ನಾನು ಮೊದಲಿನಿಂದಲೂ ಕೂಡ ಧರ್ಮಸ್ಥಳದ ಪರ ನಿಂತಿದ್ದೆ ಎಂದರು.

Tags:
error: Content is protected !!