ಮೈಸೂರು: ಗಾಲ್ಫ್ ಕ್ಲಬ್‌ನಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಕೂಡಲೇ ಅದರ ಕಾಮಗಾರಿ ಸ್ಥಗಿತ ಮಾಡಬೇಕು ಎಂದು ಮೈಸೂರು ರೇಸ್‌ಕ್ಲಬ್ ಅಧ್ಯಕ್ಷ ಜಿ.ವೆಂಕಟೇಶ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇವಲ ಶೌಚಾಲಯ ಪುನರ್ ನಿರ್ಮಾಣಕ್ಕೆ ಅನುಮತಿ ಪಡೆದು, ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಪಾಲಿಕೆ ಕಮಿಷನರ್‌ರಿಗೆ ದೂರು ನೀಡಿದ್ದೇವೆ. ಕಟ್ಟಡ ನಿರ್ಮಾಣ ಸ್ಥಗಿತ ಮಾಡದಿದ್ದರೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ಅನಧಿಕೃತ ಕಟ್ಟಡದಿಂದ ರೇಸ್ ವೇಳೆ ಕುದುರೆಗಳಿಗೆ ತೊಂದರೆ ಆಗುತ್ತದೆ. ಈಗಾಗಿ ಗಾಲ್ಫ್ ಕ್ಲಬ್‌ನವರು ಕೂಡಲೇ ಕಾಮಗಾರಿ ಸ್ಥಗಿತ ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ರೇಸ್ ಕ್ಲಬ್ ಸದಸ್ಯರಾದ ಡಾ.ವೇಣು, ಜಯರಾಜ್ ಅರಸು, ಅಜಿತ್, ಮಣಿ ಸೇರಿದಂತೆ ಹಲವರು ಹಾಜರಿದ್ದರು.





