ಮೈಸೂರು: ವಿವಾದಿತ ಪೋಸ್ಟ್‌ನಿಂದ ಆದ ಗಲಾಟೆ ಪಕ್ರರಣಕ್ಕೆ ಸಂಬಧಿಸಿದಂತೆ ಉದಯಗಿರಿ ಪೊಲೀಸ್ ಠಾಣೆಯ ಪಿಎಸ್‌ಐ ರೂಪೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ನಗರ ಪೊಲೀಸ್ ಆಯುಕ್ತರ ಆಟೋಮೇಷನ್ ಸೆಂಟರ್‌ಗೆ ವರ್ಗಾವಣೆ ಮಾಡಿ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ಗಲಾಟೆ ತಡೆಯುವ ಅವಕಾಶವಿದ್ದರೂ ಪಿಎಸ್‌ಐ ರೂಪೇಶ್ ನಿರ್ಲಕ್ಷ್ಯವಹಿಸಿದ್ದರು. ಜೊತೆಗೆ ಗಲಾಟೆಯ ರೂವಾರಿ ಸತೀಶ್‌ನನ್ನು ಪೊಲೀಸ್ ಠಾಣೆಗೆ ಕರೆತಂದು ಸಂಜೆವರೆಗೂ ಎಫ್‌ಐಆರ್ ಹಾಕದ ಹಿನ್ನಲೆಯಲ್ಲಿ ಪಿಎಸ್‌ಐನನ್ನು ವರ್ಗಾವಣೆ ಮಾಡಲಾಗಿದೆ.





