Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಾಳೆ ಅರಮನೆ ಆವರಣ ಪ್ರವೇಶಿಸಲಿರುವ ದಸರಾ ಗಜಪಡೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ನಿನ್ನೆ ದಸರಾ ಗಜಪಡೆ ಮೈಸೂರಿಗೆ ಆಗಮಿಸಿದ್ದು, ಅರಣ್ಯ ಭವನದಲ್ಲಿ ಬೀಡುಬಿಟ್ಟಿವೆ.

ನಿನ್ನೆ ಹುಣಸೂರಿನ ವೀರನಹೊಸಹಳ್ಳಿಯಲ್ಲಿ ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಮೈಸೂರಿಗೆ ಬರಮಾಡಿಕೊಳ್ಳಲಾಯಿತು. ಸಂಜೆ ವೇಳೆಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಎಂಟ್ರಿಯಾದ ಗಜಪಡೆ ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ನಾಳೆ ಬೆಳಿಗ್ಗೆ ಮೈಸೂರು ಅರಮನೆ ಆವರಣ ತಲುಪಲಿವೆ.

ನಾಳೆ ಬೆಳಿಗ್ಗೆ 10.10 ನಿಮಿಷದಿಂದ 10.30ರ ಶುಭ ಗಳಿಗೆಯಲ್ಲಿ ಅರಮನೆ ಆವರಣಕ್ಕೆ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಎಂಟ್ರಿಕೊಡಲಿದ್ದು, ಗಜಪಡೆಯನ್ನು ಸಾಂಪ್ರದಾಯಿಕವಾಗಿ ಸ್ವಾಗತ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇನ್ನು ಅರಮನೆ ಆವರಣದಲ್ಲಿ ಗಜಪಡೆ, ಕಾವಾಡಿ, ಮಾವುತರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಆನೆಗಳು ತಂಗಲು ಮತ್ತು ಕಾವಾಡಿ, ಮಾವುತರಿಗೆ ತಾತ್ಕಾಲಿಕ ಟೆಂಟ್‌ ಮಾಡಲಾಗಿದೆ. ಅರಮನೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಸರ್ಕಾರ ನಿರ್ಧಾರ ಮಾಡಿದ್ದು, ಒಂದುವರೆ ತಿಂಗಳಿಗೂ ಮೊದಲೇ ಗಜಪಡೆ ಮೈಸೂರಿಗೆ ಆಗಮಿಸಿವೆ. ದಿನನಿತ್ಯ ಗಜಪಡೆಗೆ ಜಂಬೂಸವಾರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲು ತಾಲೀಮು ನಡೆಸಲಾಗುತ್ತದೆ.

 

 

Tags: