ಮೈಸೂರು: ಇಲ್ಲಿನ ವಿಜಯನಗರ ಠಾಣೆಯಲ್ಲಿ ಕೌಟುಂಬಿಕ ಸಮಸ್ಯೆ ಕಾರಣದಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
ಜೆಸ್ಸಿ ಆಂಟೋನಿ, ಅವರ ಸಹೋದರ ಜೋಬಿ ಆಂಟೋನಿ ಹಾಗೂ ಜೋಬಿ ಪತ್ನಿ ಶರ್ಮಿಳಾ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಗಳಾಗಿದ್ದಾರೆ.
ಜೆಸ್ಸಿ ಆಂಟೋನಿಯ ಮೃತದೇಹ ರಮ್ಮನಹಳ್ಳಿಯಲ್ಲಿ ಕಳೆದ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಆತ್ಮಹತ್ಯೆಗೆ ಮಾಡಿಕೊಳ್ಳುವುದಕ್ಕಿಂತಲೂ ಮೊದಲು ಜೆಸ್ಸಿ ಆಂಟೋನಿ ಮೊಬೈಲ್ ಫೋನ್‌ನಲ್ಲಿ ಮಾಡಿದ್ದ ವಿಡಿಯೋದಲ್ಲಿ ಜೋಬಿಯಿಂದಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ನನ್ನ ತಂಗಿ ಹಾಗೂ ಆಕೆಯ ಮಗುವನ್ನು ಕೊಲ್ಲಲು ಅವರು ಪ್ರೇರೇಪಿಸಿದ್ದಾರೆ ಎಂದು ಆರೋಪ ಮಾಡಿದ್ದರು.
ಈ ಮಧ್ಯೆ ಜೋಬಿ ಆಂಟೋನಿ ಹಾಗೂ ಅವರ ಪತ್ನಿ ಶರ್ಮಿಳಾ ಮೃತದೇಹಗಳು ವಿಜಯನಗರದ ಸಾರ್ವಜನಿಕ ಕ್ರೀಡಾಂಗಣದ ನೀರಿನ ಟ್ಯಾಂಕ್‌ನ ಏಣಿಯಲ್ಲಿ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಪೊಲೀಸರು ತನಿಖೆ ಶುರುಮಾಡಿದ್ದಾರೆ.





