ಮೈಸೂರು: ಯಾರೇ ಪಕ್ಷ ತೊರೆದರೂ ಮತ್ತೆ ಯಾರಾದರೂ ನಾಯಕರಾಗಿ ಉದಯಿಸುತ್ತಾರೆ ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದ್ದಾರೆ.
ಬಿಜೆಪಿಯಲ್ಲಿ ನಾಯಕತ್ವದ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯ ನಾಯಕರು ಬಿಜೆಪಿಯಲ್ಲಿ ಬಹಳಷ್ಟು ಮಂದಿ ಇದ್ದಾರೆ. ಉಮಾಭಾರತಿ ಪಾರ್ಟಿ ಬಿಟ್ಟಾಗಲೂ ಏನು ಆಗಲಿಲ್ಲ. ಗುಜರಾತ್‌ನಲ್ಲಿ ಕೇಶುಭಾಯಿ ಪಟೇಲ್ ಪಕ್ಷ ತೊರೆದರು. ಆಗ ನರೇಂದ್ರ ಮೋದಿಯವರಿಗೆ ನಾಯಕತ್ವ ನೀಡಲಾಯಿತು.
ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೊಡ್ಡವರು ಯಾರು ಇಲ್ಲ. ಯಾರೇ ಪಕ್ಷ ತೊರೆದರೂ ಮತ್ತೆ ಯಾರಾದರೂ ನಾಯಕರಾಗಿ ಉದಯಿಸುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ಥಾನಕ್ಕೆ ಮತ್ತೊಬ್ಬರನ್ನು ತರುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ, ಪಕ್ಷದ ನಿರ್ಧಾರವೇ ಅಂತಿಮ. ಪಕ್ಷದ ನಿರ್ಧಾರಕ್ಕೆ ಎಲ್ಲಾ ನಾಯಕರೂ ಬದ್ದರಾಗಿರುತ್ತಾರೆ ಎಂದು ಹೇಳಿದರು.





