Mysore
25
scattered clouds

Social Media

ಮಂಗಳವಾರ, 13 ಜನವರಿ 2026
Light
Dark

ರಾಹುಲ್‌ ಗಾಂಧಿ ಜೊತೆ ಯಾವ ಮಾತುಕತೆಯೂ ಆಗಿಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು: ಅಧಿಕಾರ ಹಂಚಿಕೆ‌ ವಿಚಾರ ಕುರಿತಂತೆ ಊಹಾಪೋಹಗಳ ಬಗ್ಗೆ ಚರ್ಚೆ ಮಾಡುತ್ತಿರುವುದು ಮಾಧ್ಯಮದವರು. ಹೈಕಮಾಂಡ್ ತೀರ್ಮಾನಕ್ಕೆ ನಾನು ಮತ್ತು ಡಿ.ಕೆ.ಶಿವಕುಮಾರ್ ಬದ್ಧ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಬಂದರು ಕಾರ್ಯಕ್ರಮಕ್ಕೆ ತೆರಳಿದರು. ಸಂಜೆ ವಾಪಸ್ ಬರುತ್ತಾರೆ ವಾಪಸ್ ತೆರಳುತ್ತಾರೆ. ರಾಹುಲ್ ಗಾಂಧಿ ಕಮಿಂಗ್ ಅಂಡ್ ಗೋಯಿಂಗ್ ಅಷ್ಟೇ. ಯಾವ ಸಭೆಯೂ ಇಲ್ಲ ಯಾವ ಮಾತುಕತೆ ಇಲ್ಲ. ಸಂಜೆಯೂ ಯಾವ ಮಾತುಕತೆಯೂ ಇರುವುದಿಲ್ಲ. ಸಂಜೆ ನಾನೇ ಬಂದು ಬೀಳ್ಕೊಡುತ್ತೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

ಇನ್ನು ಅಧಿಕಾರ ಹಂಚಿಕೆ‌ ವಿಚಾರ ಊಹಾಪೋಹಗಳ ಬಗ್ಗೆ ಚರ್ಚೆ ಮಾಡುತ್ತಿರುವುದು ಮಾಧ್ಯಮದವರು. ನಮ್ಮಲ್ಲಿ ಯಾವ ಗೊಂದಲವೂ ಇಲ್ಲ, ಯಾವ ಸಮಸ್ಯೆಯೂ ಇಲ್ಲ. ಯಾರೋ ಎಂಎಲ್ಎಗಳು ಏನೋ ಗೊತ್ತಿಲ್ಲ ದೇಏನೋ ಹೇಳುತ್ತಾರೆ. ಅವರಿಗೆ ಏನು ಗೊತ್ತು ರೀ.? ಮಾತನಾಡಬೇಕಿರುವುದು ನಾನು ಮತ್ತು ಡಿ.ಕೆ.ಶಿವಕುಮಾರ್. ಡಿ.ಕೆ ಶಿವಕುಮಾರ್ ಏನಾದ್ರು ಮಾತನಾಡಿದ್ದಾರಾ? ನಾನೇನಾದ್ರು ಮಾತನಾಡಿದ್ದೀನಾ.? ಯಾರೋ ಮಾಹಿತಿ ಇಲ್ಲದ ಎಂಎಲ್ಎಗಳು ಹೇಳಿದ್ದನ್ನು ಕೇಳಿದ್ರೆ ಹೇಗೆ. ನಮ್ಮಲ್ಲಿ ಯಾವ ಗೊಂದಲಗಳು ಇಲ್ಲ. ಯಾವ ಬೇರೆ ರೀತಿಯ ಚರ್ಚೆಗಳು ಇಲ್ಲ. ಇರುವುದೆಲ್ಲ ಬರೀ ಮಾಧ್ಯಮಗಳಲ್ಲಿ. ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತನಾಡಿದ್ದೇನೆ. ಡಿ.ಕೆ.ಶಿವಕುಮಾರ್ ಜೊತೆಯಲ್ಲೂ ಮಾತನಾಡಿದ್ದೇನೆ. ಎಲ್ಲೂ ಯಾವತ್ತು ಯಾರ ಅಪಸ್ವರಗಳು ಇಲ್ಲ, ಯಾವ ಸಮಸ್ಯೆಗಳು ಇಲ್ಲ. ಏನೇ ತೀರ್ಮಾನಗಳಿದ್ದರೂ ಅದನ್ನ ಹೈಕಮಾಂಡ್ ಮಾಡುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಮತ್ತು ಡಿ.ಕೆ ಶಿವಕುಮಾರ್ ಬದ್ಧ ಎಂದು ಹೇಳಿದ್ದೇವೆ. ಸದ್ಯಕ್ಕೆ ನಾನೇನು ದೆಹಲಿಗೆ ಹೋಗುತ್ತಿಲ್ಲ ಎಂದು ಹೇಳಿದರು.

ಇನ್ನು ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಬಜೆಟ್ ಮಂಡಿಸುತ್ತೇನೆ. ಅದಕ್ಕೆ ಎಲ್ಲಾ ತಯಾರಿಗಳು ನಡೆದಿದೆ. ಬಜೆಟ್‌ಗೂ ಮುನ್ನವೇ ಸರ್ಕಾರದ ಸಾಧನ ಸಮಾವೇಶವನ್ನು ಮಾಡುತ್ತೇವೆ. ಫೆಬ್ರವರಿ.13ರಂದು ಹಾವೇರಿಯಲ್ಲಿ ಸಮಾವೇಶ ಮಾಡಲು ತಯಾರಿ ನಡೆಯುತ್ತಿದೆ ಎಂದರು.

ಇನ್ನು ಕೇಂದ್ರ ಸಚಿವ ಎಚ್‌ಡಿ.ಕುಮಾರಸ್ವಾಮಿಗೆ ಹುಷಾರಿಲ್ಲ ಎಂದು ಕೇಳಿದೆ. ಈಗ ಅವರು ಹುಷಾರಿಗಿದ್ದಾರೆ. ಕುಮಾರಸ್ವಾಮಿ ಏನು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದು ಹೇಳಿಲ್ಲ. ನೀವೇ ಮಾಧ್ಯಮದವರು ಹಾವಾ ಭಾವ ನೋಡಿ ಮಾತಿನ ಏರಿಳಿತ ನೋಡಿ ಹೇಳುತ್ತಿದ್ದೀರಾ‌. ಆ ರೀತಿಯಾಗಿ ಹಾವಾಭಾವದ ಮೇಲೆ ಎಲ್ಲಾ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇನ್ನು ಪಾಲಿಕೆ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಪಾಲಿಕೆ ಚುನಾವಣೆಗೆ ಸಿದ್ದರಾಗಿದ್ದೇವೆ. ಬಿಜೆಪಿ-ಜೆಡಿಎಸ್ ಒಂದಾಗಿ ಚುನಾವಣೆ ನಡೆಸಿದರೂ ನಮಗೆ ಸಮಸ್ಯೆ ಇಲ್ಲ. ಇರುವುದು ಎರಡೇ, ಒಂದು ಕಾಂಗ್ರೆಸ್ ಮತ ಮತ್ತೊಂದು ಕಾಂಗ್ರೆಸ್ ವಿರೋಧಿ ಮತ. ಇಲ್ಲಿ ಜೆಡಿಎಸ್ ಮತ ಬೇರೆ ಬಿಜೆಪಿ ಮತ ಬೇರೆ ಎಂದಿರುವುದಿಲ್ಲ. ಎರಡು ಪಕ್ಷದ ಒಂದೇ ಅಭ್ಯರ್ಥಿಗೆ ಬಿದ್ದರೆ ಕಾಂಗ್ರೆಸ್ ಸಮಸ್ಯೆಯಾಗುತ್ತದೆ ಎಂಬುದು ತಪ್ಪು ಅಭಿಪ್ರಾಯ ಎಂದರು.

 

 

Tags:
error: Content is protected !!