Mysore
29
few clouds

Social Media

ಮಂಗಳವಾರ, 24 ಮಾರ್ಚ್ 2026
Light
Dark

ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ: ಎಡಿಜಿಪಿ ಹಿತೇಂದ್ರ

ಮೈಸೂರು: ಅವಹೇಳನಕಾರಿ ಪೋಸ್ಟ್‌ಗೆ ಸಂಬಂಧಿಸಿದಂತೆ ಉದಯಗಿರಿ ಪೊಲೀಸ್‌ ಠಾಣೆ ಸಮೀಪ ನಡೆದ ಕಲ್ಲು ತೂರಾಟದಲ್ಲಿ 7 ಮಂದಿ ಪೊಲೀಸರಿಗೆ ಗಾಯವಾಗಿದ್ದು, ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಎಡಿಜಿಪಿ ಜಿತೇಂದ್ರ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಗಲಾಟೆ ಮಾಡಿದವರ ಬಂಧನಕ್ಕೆ ಸ್ಥಳೀಯ ಪೊಲೀಸರಿಂದ ತಂಡ ರಚಿಸಲಾಗಿದೆ. ಅವಹೇಳನಕಾರಿ ಪೋಸ್ಟರ್‌ ವಿಚಾರದಲ್ಲಿ ಕೆಲವು ವದಂತಿ ಹಬ್ಬಿದ್ದಕ್ಕೆ ಗಲಾಟೆಯಾಗಿದೆ ಎಂದರು.

ಪೋಸ್ಟರ್‌ ವಿಚಾರದಲ್ಲಿ, ಗಲಾಟೆಯ ವಿಚಾರದಲ್ಲಿ, ಯಾರಿದ್ದಾರೆ ಎಂಬುದು ತನಿಖೆ ಮೂಲಕ ಗೊತ್ತಾಗುತ್ತದೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.

 

 

Tags:
error: Content is protected !!